ಬಾನಲ್ಲಿ ಗುಡುಗಿದನು ಮೇಘರಾಜ
ಭೂಮಿಯ ಜೊತೆ ಮಾತನಾಡಬಯಸಿ
ಹುಡುಗಾಟದ ಹುಡುಗಿಯವಳು ಮರುನುಡಿಯಲಿಲ್ಲ
ಕೇಳಲೇ ಇಲ್ಲವೆಂಬಂತೆ ನಟಿಸಿ
ಮಲಗಿರುವಳೇನೋ ಎಚ್ಚರಗೊಳಿಸೋಣವೆಂದು
ಕಳುಹಿಸಿದನವ ಮಿಂಚೆಂಬ ಬೆಳಕು
ಆದರೆ ಅದೂ ನೀಡಲಿಲ್ಲ
ಭೂಮಿಯ ನಟನೆಗೆ ಯಾವುದೇ ತೊಡಕು
ಗಾಢ ನಿದ್ರೆಯಿಂದ ಎಚ್ಚೆತ್ತುಕೊಳ್ಳಲಿ
ಎಂದು ಸುರಿಸಿದ ವರ್ಷಧಾರೆ
ಅದರಿಂದ ಪುಳಕಗೊಂಡು ಪರಿಮಳ ಸೂಸಿದರೂ
ಪ್ರತಿಕ್ರಿಯಿಸಲಿಲ್ಲ ಧರೆ
ಕುಪಿತನಾದ ಮೇಘರಾಜ
ಆರ್ಭಟಿಸಿದಾಗ ಸಿಡಿಲು ಬಂದೆರಗಿತು
ನಡುಗಿ ಹೋದಳು ಭೂಮಿ
ಇದರೊಂದಿಗೆ ಅವಳ ನಟನೆಯೂ ಕೊನೆಗೊಂಡಿತು
ಭೂಮಿಯ ಚುಂಬಿಸಿ ಮೇಘರಾಜನ
ಸಂದೇಶ ರವಾನಿಸಿತು ಮಳೆ
ಅವನೆಲ್ಲ ತನ್ನ ಒಡಲಾಳದಲ್ಲಿ
ಬೆಚ್ಚಗೆ ತುಂಬಿಸಿಕೊಂಡಳು ಇಳೆ
ಯೋಚಿಸಿದಷ್ಟೂ ಅರ್ಥಭರಿತವಾದ ಕವನ!
ReplyDeleteಯೆಲ್ಲಿ೦ದ ಯೆಲ್ಲಿಗೆ ರೀ ಹೊಲಿಕೇ!!??
ಇಂದುಶ್ರಿ..
ReplyDeleteನಿಮ್ಮ ಇ ಕವನವನ್ನು ಸಂಪದ ನಲ್ಲಿ ನೋಡಿದ್ದೇ....ಅಲ್ಲಿಯೇ ಪ್ರತಿಕ್ರಿಯಿಸಿದ್ದೇನೆ... ಇನ್ನೊಮ್ಮೆ ಬೇಡ ಅಲ್ವ... :-)
ನಿಮ್ಮ ಬ್ಲಾಗ್ ನ ಕೊಂಡಿಯನ್ನು ಅನುಸರಿಸಿ ನಿಮ್ಮ ಕವನಗಳ ಲೋಕಕ್ಕೆ ಬಂದೆ... ಪೂರ್ತ ನೋಡಲಿಲ್ಲ ನಿದಾನಕ್ಕೆ ನೋಡಿ ಪ್ರತಿಕ್ರಿಯಿಸುತ್ತೇನೆ...
ಬಿಡುವಾದಾಗ ನನ್ನ ಬ್ಲಾಗಿನ ಲೋಕದ ಕಡೆ ಒಮ್ಮೆ ಬಂದು ಹೋಗಿ.......
ಗುರು
ಸರಿ ಗುರು ಅವರೆ........
ReplyDeleteಇಂದುಶ್ರೀ ಮೇಡಮ್,
ReplyDeleteಗುರು ಬ್ಲಾಗಿನಿಂದ ನಿಮ್ಮ ಬ್ಲಾಗಿಗೆ ಬಂದೆ...ಕವನ ಓದಿದೆ...
ವಾಹ್! ಅನ್ನಬೇಕೆನಿಸಿತ್ತು...
ಮಳೆ ಸುರಿಸುವ ಆಕಾಶ ಮತ್ತು ಅದನ್ನು ಪಡೆಯುವ ಧರೆಯ ಬಗ್ಗೆ ಎಂಥ ಕಲ್ಪನೆ...ಅವೆರಡರ ಕ್ರಿಯೆ ಮತ್ತು ಪ್ರತಿಕ್ರಿಯೆ ಕವನದಲ್ಲಿ ಹೊಸತು ಎನಿಸಿತು..
ಕವನ ಇಷ್ಟವಾಯಿತು. ನಿಮ್ಮ ಬ್ಲಾಗನ್ನು ಲಿಂಕಿಸಿಕೊಳ್ಳುತ್ತೇನೆ...
ಬಿಡುವು ಮಾಡಿಕೊಂಡು ಉಳಿದ ಲೇಖನಗಳನ್ನು ಓದುತ್ತೇನೆ..
ಬಿಡುವು ಮಾಡಿಕೊಂಡು ನನ್ನ ಛಾಯಾಕನ್ನಡಿ ಬ್ಲಾಗಿಗೆ ಬನ್ನಿ..
ಧನ್ಯವಾದಗಳು.
ಖಂಡಿತ ಶಿವು ಅವರೆ...
ReplyDeleteನನ್ನನ್ನು ಮೇಡಮ್ ಅಂತ ಕರೆಯುವ ಅವಶ್ಯಕತೆ ಇಲ್ಲ...
@ ಗಣೇಶ ಭಟ್ಟ..
ReplyDelete೨ನೇ ವರ್ಷ ಮುಗಿಯೋಕೆ ಇನ್ನು ೩ ಪ್ರಾಕ್ತಿಕಲ್ ಎಕ್ಸಾಮ್ ಮುಗಿಯಬೇಕು...
Indu avarae, naanu nimma thumba kavanagallanu hodidaenae...
ReplyDeleteNevu ee kavanagalanu pusthakada roopadalli
prakatisabahudu yembhudu nanna hanisikae...
kaarana ee kavanagallanu innustu kannadigaru hodi
aananda padeyali yendu...idu nanna hanisikae.