Tuesday, July 7, 2009

ನನ್ನ ೪ನೇ ಸೆಮಿಸ್ಟರ್

ಸುಮಾರು ೨ ತಿಂಗಳಾಯಿತು
ಆ ಸವಿಯನುಂಡು
ಕಾಲೇಜು ದಿನಗಳೇ ಹಾಗೇ
ನಾವು ಕಪಿಗಳ ಒಂದು ತುಂಡು

ಸೋಮವಾರದಿಂದ ಶುಕ್ರವಾರ
ನಡೆಯುತ್ತಿದ್ದ ಘಟನೆಗಳು ನೂರಾರು
ಅವುಗಳಲ್ಲಿ ಇತ್ತೀಚೆಗಿನ ೪ನೇ ಸೆಮಿಸ್ಟರಿನ
ಕೆಲವು ತೆರೆದುಕೊಳ್ಳುತ್ತಿವೆ ನೆನಪಿನ ಬುತ್ತಿ ಬಿಚ್ಚಲು

ತರಗತಿಗಳು ೫ನೇ ಮಹಡಿಯಲ್ಲಿದ್ದಾಗ ತಯಾರಾಗಿರದಿದ್ದ
ಲಿಫ್ಟ್ ತಯಾರಾಯಿತು ೪ನೇ ಮಹಡಿಗೆ ಬಂದಾಗ
ಆದರೇನು ಪ್ರಯೋಜನ ೬,೭ನೇ ಮಹಡಿಯವರೇ
ತುಂಬಿರುತ್ತಿದ್ದರು ಅದರಲ್ಲಿ ನಮಗೆ ಬೇಕಾದಾಗ

ನೆನಪಲ್ಲುಳಿಯುವುದು ಚಿರಕಾಲ ಈ ಸೆಮಿಸ್ಟರಿನ
ಬುಧವಾರದ ಪಠ್ಯೇತರ ಚಟುವಟಿಕೆಗಳು
ಕಾಲ್ಚೆಂಡು,ವಾಲಿಬಾಲ್,ಕ್ರಿಕೆಟ್, ಕೊಲಾಜ್, ನೃತ್ಯ...
ಭಾಗವಹಿಸುತ್ತ, ಸಂಘಟಿಸುತ್ತ ಹುರಿದುಂಬಿಸುತ್ತಿದ್ದ ದಿನಗಳು

ಪ್ರತಿ ಪರೀಕ್ಷೆಯ ನಂತರ ಕಳೆದ ಕ್ಷಣಗಳೂ ಮಧುರ
ಜನುಮದಿನದ ಆಚರಣೆಗಳಿಗೂ ಬರವಿಲ್ಲ
ಜೊತೆಗೇ ನಮ್ಮ ಪ್ರಶಸ್ತಿ ಪ್ರದಾನ ಸಮಾರಂಭ
ಹಾಗೂ ನಮ್ಮ ಕಾಲೇಜಿನ ೩ ದಿನಗಳ ಉತ್ಸವ "ಆತ್ಮ ತೃಷಾ"

"ಆತ್ಮ ತೃಷಾ"ಕ್ಕಾಗಿ ನನ್ನ ಸ್ನೇಹಿತೆಯರು ನೃತ್ಯ ಮಾಡುವ ದಿನ ಮಳೆ ಬಂದಿದ್ದು
ಆನಂತರ ಮುಂದೂಡಲ್ಪಟ್ಟ ಆ ಕಾರ್ಯಕ್ರಮಕ್ಕೆ ಮನೆಯಲ್ಲಿ ಕಾಡಿ ಬೇಡಿ ಹೋದದ್ದು
ಒಂದು ಕಾರ್ಯಕ್ರಮದಲ್ಲಿ ನಿರೂಪಣೆ ಮಾಡುವ ಅವಕಾಶ ದೊರೆತದ್ದು
ನಾನು ವಂದಿಸುವ ಮುನ್ನ ಪ್ರಾಂಶುಪಾಲರೇ ನನಗೆ "ಗುಡ್ ಮಾರ್ನಿಂಗ್" ಹೇಳಿದ್ದು ;)

ಸ್ನೇಹಿತರೊಂದಿಗೆ ಪ್ರವಾಸಕ್ಕೆ ಹೊಗಲಾಗದಿದ್ದುದು
ಅಪ್ಪ ಹೊಸ ಮೊಬೈಲ್ ಕೊಡಿಸಿದ್ದು
LIC* ಕ್ಲಾಸಲ್ಲಿ ಕುಳಿತು ಕವನ ಬರೆದಿದ್ದು
ಹೇಗೆ ಮರೆಯಲಿ ನಾನು ಸಂಪದಕ್ಕೆ ಸೇರಿದ್ದು

ನನ್ನ ಜೀವನದ ಈ ನಾಲ್ಕು ತಿಂಗಳು
ನಾನನುಭವಿಸಿದ ಆನಂದ ಅಪಾರ
ಅನೇಕ ಸ್ನೇಹಿತರು,ಮನೆಯಲ್ಲೊಂದು ಹೊಸ ನಂಟು
ಸ್ವರ್ಗಕ್ಕಿನ್ನಿತ್ತು ಮೂರೇ ಗೇಣು

ಅಷ್ಟರಲ್ಲಿ ಬಂತು ನಮ್ಮ ಸೆಮಿಸ್ಟರಿನ ಅಂತಿಮ ಪರೀಕ್ಷೆ
೩ ವಾರದಲ್ಲಿ ಮುಗಿದು ಅದಾದ ೧ ವಾರಕ್ಕೆ ಫಲಿತಾಂಶವೂ ಬಂತು
ಈಗ ನಮಗಿದೆ ಇನ್ನೂ ೨ ತಿಂಗಳ ರಜೆ
ರಜೆಯೋ ಸಜೆಯೋ ತಿಳಿಯದೇ ಮನ ಕಾಲೇಜು ಪುನರಾರಂಭವಾಗುವುದನ್ನೇ ಕಾಯುತಿದೆ
(*LIC- Linear Integrated Circuits. Life Insurance Corporation ಅಲ್ಲ ;) )

3 comments:

  1. ಇಂಧುಶ್ರೀ ಮೇಡಮ್,

    ಈಗ ಸಿಕ್ಕಿರುವ ರಜವನ್ನು ಮಜಾ ಮಾಡಿ...ನಿಮ್ಮ ಸೆಮಿಷ್ಟರ್ ಬದುಕಿನ ಕವನ ತುಂಬಾ ಚೆನ್ನಾಗಿ ಬರೆದಿದ್ದೀರಿ...

    ಶಿವು.ಕೆ.

    ReplyDelete
  2. ಅಲ್ರೀ ಶಿವು ಒಂದೇ ಸಾರಿ ೩ ತಿಂಗಳು ರಜ ಕೊಟ್ರೆ ಬೇಜಾರಾಗೊಲ್ಬಾ...ಅದೇ ಬೇಜಾರು ನಂಗೂ ಆಷ್ಟೆ... ಆಮೇಲೆ ನಾನು ಇಂದುಶ್ರೀ ಇಂಧುಶ್ರೀ ಅಲ್ಲ...

    ReplyDelete
  3. ಇಂದುಶ್ರಿ...
    wish you happy holidays..... ಸಿಕ್ಕಿರುವ ರಜೆನ ಚೆನ್ನಾಗಿ enjoye ಮಾಡಿ ........ಆಯ್ತಾ.... ಹಾಗೆ correct ಆಗಿ ಉಪಯೋಗಿಸ್ಕೊಳ್ಳಿ

    ReplyDelete