Friday, June 17, 2011

ನಾನ್ಯಾಕೆ ಇಷ್ಟು ದಿನ ಬ್ಲಾಗ್ update ಮಾಡಿರಲಿಲ್ಲ ಅಂದ್ರೆ...

ಅಲ್ಲಾ ಎಷ್ಟು ದಿನ ಆಗಿ ಹೋಯ್ತಲ್ಲ ನಾನು ನನ್ನ ಬ್ಲಾಗ್ update ಮಾಡಿ. ಆರು ತಿಂಗಳ ಮೇಲಾಯ್ತು. ಬರೀಬೇಕು ಅಂತ ಆಸೆಯಿದ್ರೂ ಯಾವುದರ ಬಗ್ಗೆ ಬರೆಯೋದು ಅಂತ ಗೊತ್ತಾಗ್ತಾ ಇಲ್ಲ. ಅದಕ್ಕೆ ಬ್ಲಾಗ್ ಬರೆಯದೇ ಇದ್ದುದಕ್ಕೆ ಕಾರಣ ಏನು ಅಂತಾನೆ ಬರೆಯೋಣ ಅಂತ ಶುರು ಮಾಡ್ತಿದ್ದೀನಿ. ಈ post ಮುಗಿಸುವ ಹೊತ್ತಿಗೆ ಬೇರೆಯೇನಾದ್ರೂ ಹೊಳೆದರೆ ಅದಕ್ಕೆ deviate ಆಗಿ ಬಿಡ್ತೀನಿ ಸರೀನಾ??

ನಾನು ನಿಮ್ಮಲ್ಲಿ ಕೆಲವರಿಗೆ ಹೇಳಿದ್ದೆ project ಕೆಲ್ಸ ಸ್ವಲ್ಪ ಜಾಸ್ತಿಯಿದೆ. ಸಮಯ ಸಿಗ್ತಿಲ್ಲ ಅಂತ. ಆದ್ರೆ ಈಗ ಅದೆಲ್ಲ ಸುಳ್ಳು ಅಂತ ಗೊತ್ತಾಗಿದೆ. ಅದು ನನ್ನನ್ನು ನಾನೇ ಸಮಾಧಾನ ಪಡಿಸಿಕೊಳ್ಳೋಕೆ ಕೊಟ್ಟಿದ್ದ ಉತ್ತರ ಅಷ್ಟೇ. ಯಾವಾಗಲೂ‌ ಕ್ಲಾಸು,ಪಾಠ,ರೆಕಾರ್ಡ್ ಅಂತೆಲ್ಲ ತೊಡಗಿಸಿಕೊಂಡಿರ್ತಾ ಇದ್ದ ನನಗೆ ೭ನೇ ಸೆಮೆಸ್ಟರ್ ಮುಗಿದು ೮ನೇ‌ ಸೆಮೆಸ್ಟರ್ ಶುರು ಆದಾಗ ಇದೆಲ್ಲಕ್ಕೂ‌ ಕಡಿವಾಣ ಬಿತ್ತು. ನಮ್ ಕಾಲೇಜ್ ಅಲ್ಲಿ ೮ನೇ ಸೆಮೆಸ್ಟರಲ್ಲಿ ಕೇವಲ ಒಂದು project ಒಂದು seminar ಅಷ್ಟೇ. ಯಾವುದೇ theory subjects ಇಲ್ಲ. ಒಂದು ರೀತಿ ೮ನೇ ಸೆಮೆಸ್ಟರ್ ಬೋರ್ ಹೊಡೆಸುತ್ತಿತ್ತು. projectಗೆ ನಮಗಿದ್ದ weekly target ಒಂದು ಅಥವಾ ಎರಡು ದಿನಗಳಲ್ಲಿ ಮುಗಿಸಬಹುದಾಗಿತ್ತು. ಪ್ರತಿ ಬುಧವಾರ ನಮ್ಮ guideಗೆ ವಾರದಲ್ಲಿ ಏನೇನು ಮಾಡಿದ್ದೀವಿ ಅಂತ ಹೇಳ್ಬೇಕಿತ್ತು. ನಾನು ಕೆಲ್ಸ ಮಾಡ್ತಾ ಇದ್ದಿದ್ದು ಬಹುತೇಕ ಬಾರಿ ಮಂಗಳವಾರ ಮಾತ್ರ. ಬೇರೆ ದಿನಗಳಲ್ಲಿ ಏನು ಮಾಡ್ತಾ ಇದ್ದೆ ಅನ್ನೋದು ನಂಗೂ ಗೊತ್ತಿಲ್ಲ. ಆ ದಿನ ಕಳೆದು ಹೋಗಿ ಬಿಡ್ತಿತ್ತು. ದಿನೇ‌ ದಿನೇ ಸೋಮಾರಿಯಾಗ್ತಾ ಹೋದೆ. ನನ್ನ ಕೆಲಸ ಮಾಡದಷ್ಟೇನೂ ಸೋಮಾರಿಯಾಗಿರಲಿಲ್ಲ. ನನ್ನ ಕೆಲಸ ಮುಗಿಸಿದ ಮೇಲೆ ಬೇರೆ ಏನನ್ನೂ ಮಾಡೋಕೆ ಆಸಕ್ತಿಯಿರಲಿಲ್ಲ.

Project ವಿಷಯವಾಗಿ ಏನಾದ್ರೂ‌ ಯೋಚಿಸ್ತಾ ಇದ್ದಾಗ ಸಹಕರಿಸ್ತಾ ಇದ್ದ ಮನಸ್ಸು ಬೇರೆ ವಿಷಯಗಳ ಕಡೆ ಹೋಗೋಕೆ ಮುಷ್ಕರ ಹೂಡ್ತಾ ಇತ್ತು. "An idle mind is devil's workshop" ಅಂತಾರೆ. ಆದ್ರೆ ನನ್ನ ಮನಸ್ಸು ಎಷ್ಟು ನಿಷ್ಕ್ರಿಯವಾಗಿತ್ತಂದ್ರೆ ಕೆಟ್ಟ ವಿಷಯಗಳನ್ನೂ ಯೋಚಿಸ್ತಾ ಇರ್ಲಿಲ್ಲ. ಯಾಕೆ ಹೀಗೆ ಅಂತ ತುಂಬಾ ಸಲ ಯೋಚ್ನೆ ಮಾಡೋಕೆ ಪ್ರಯತ್ನ ಪಟ್ರೂ ಅದಕ್ಕೂ‌ ಮನಸ್ಸಿನ ಮೌನವೇ ಉತ್ತರವಾಗಿತ್ತು. I started to think that I had stopped thinking.

ನಾವು ಯಾವಾಗಲೂ‌ ಅಷ್ಟೇ‌ ಒಂದು ಬದಲಾದ ಸ್ಥಿತಿಗೆ ಹೊಂದಿಕೊಳ್ಳುವಾಗ ಮೊದಲು ಹಿಂದೇಟು ಹಾಕಿದ್ರೂ ಕಾಲಕ್ರಮೇಣ ಆ ಬದಲಾದ ಸ್ಥಿತಿಗೆ ಹೊಂದಿಕೊಂಡು ಬಿಡ್ತೀವಿ. ನನ್ನ ಮನಸಿನ ಈ‌ ಸ್ಥಿತಿ ಮುಂದುವರೆದಂತೆ ಅದಕ್ಕೆ ಮಾನಸಿಕ ಜಡತ್ವ ಅನ್ನೋ ಹೆಸರು ಕೊಟ್ಟು ನಾನು ಆ ಮನಃಸ್ಥಿತಿಯನ್ನು ಒಪ್ಪಿಕೊಳ್ಳುತ್ತಾ ಹೋದೆ. ಮನಸು ಯೋಚ್ನೆ ಮಾಡದೇ ಇರೋ ಸ್ಥಿತಿನೇ ಅದರ ನಿಜಸ್ಥಿತಿಯೇನೋ‌ ಅನ್ನುವಷ್ಟರ ಮಟ್ಟಿಗೆ ನನ್ನ ಮನಸ್ಸು ಆಲಸಿಯಾಗಿಬಿಡ್ತು. ನಾನು ಈ‌ ಸ್ಥಿತಿಗೆ ಏನೇನೋ ನೆಪ ಹೇಳ್ತಾ ಅದನ್ನೇ ಸಮರ್ಥಿಸುತ್ತಾ ಹೋದೆ. ಇನ್ನೇನು ನನ್ನ ಮನಸ್ಸು ಸಂಪೂರ್ಣ ನಿಷ್ಕ್ರಿಯವಾಗುತ್ತೇನೋ ಅಂತ ಅನ್ನಿಸಿದಾಗ ಮತ್ತೆ ಯೋಚಿಸಲು ಶುರು ಮಾಡಿದೆ. ನನಗೆ ಆಶ್ಚರ್ಯ ಆಯ್ತು. ನನ್ನ ಮನಸ್ಸು ನನ್ಗೆ ಸಹಕರಿಸ್ತಾ ಇತ್ತು. ಆದರೆ ಆ ಯೋಚೆನೆ ನನ್ನ ಗೊಂದಲಗಳಿಗೆ ದಾರಿಯಾಯ್ತು. ನನ್ನ - ಆಲಸಿಯಾಗಿರಲಿಲ್ಲ. ನನ್ನ projectನ ಬೆಳವಣಿಗೆಗೆ ಸಂಪೂರ್ಣವಾಗಿ ಬೆಂಬಲಿಸುತ್ತಿತ್ತು. ಹಾಗಾಗಿ ಅದು ಯೋಚನಾರಹಿತ ಸ್ಥಿತಿಗೇನೂ ಹೋಗಿರಲಿಲ್ಲ.I had not stopped thinking. ಆದ್ರೆ ನಾನ್ಯಾಕೆ ಏನನ್ನೂ ಬರೀಲಿಲ್ಲ? ಬರೆಯೋಕೆ ಆಸಕ್ತಿಯಿರಲಿಲ್ವಾ?? ಹಾಗೇನೂ‌ ಇಲ್ಲ. ಏಷ್ಟೋ ಬಾರಿ ನನ್ನ ಬ್ಲಾಗಲ್ಲಿ ಏನಾದ್ರೂ‌ ಬರೀಬೇಕು ಅಂತ ಅನ್ನಿಸ್ತಾ ಇತ್ತು. ಆದ್ರೆ ಯಾವುದರ ಬಗ್ಗೆ ಬರೆಯೋದು ಅಂತ ಗೊತ್ತಾಗದೇ‌ ಸುಮ್ಮನಾಗ್ತಿದ್ದೆ.

ನನ್ನ ಪ್ರಕಾರ ಇದೊಂಥರಾ ನನ್ನ ಮತ್ತು ನನ್ನ ಮನಸ್ಸಿನ ನಡುವೆ ಆಗಿದ್ದ ಒಪ್ಪಂದ. project ವಿಷಯವಾಗಿ ಏನೇ ಬೇಕಿದ್ರೂ‌ ತಕ್ಷಣ ಗೊತ್ತಾಗಬೇಕಾದ್ರೆ ಮನಸ್ಸಿನ ಸಂಪೂರ್ಣ bandwidth ಅದಕ್ಕೆ ಮಾತ್ರ ಮೀಸಲಿಡಬೇಕೆಂಬ ಮೂಢ ನಂಬಿಕೆ ಅದಕ್ಕೆ ಕಾರಣ. ಬಹುಶಃ project ಶುರುವಾದಾಗ ಏಳು ಸೆಮೆಸ್ಟರ್ ಗಳಲ್ಲಿ ಕಲಿಯದಂಥ ಹೊಸ ವಿಷಯ ಆಯ್ಕೆ ಮಾಡಿಕೊಂಡು ಅದನ್ನು ಅರ್ಥ ಮಾಡಿಕೊಳ್ಳಲು ತುಂಬಾ ಕಷ್ಟ ಪಡ್ತಿದ್ದಾಗ ತದೇಕಚಿತ್ತದಿಂದ project ಬಗ್ಗೆ ಮಾತ್ರ ಯೋಚಿಸಿದಾಗ ಅದು ಅರ್ಥವಾಗಿರಬೇಕು. ಆಗ ಸಧ್ಯಕ್ಕೆ higher priority ಇರೋದು projectಗೆ. ಅದನ್ನು ಮೊದಲು ಮುಗಿಸಬೇಕು. ಹಾಗೆ ಮಾಡಬೇಕಂದ್ರೆ ಬೇರೆಲ್ಲ ಯೋಚನೆ ಬಿಡಬೇಕೆಂದುಕೊಂಡಿದ್ದೆ ನನ್ನ ಮಾನಸಿಕ ಜಡತ್ವಕ್ಕೆ ಕಾರಣ ಅಂತ ಗೊತ್ತಾಯ್ತು. ಅದಷ್ಟೇ ಅಲ್ಲದೆ ಯುದ್ಧಕಾಲದಲ್ಲಿ ಮಾತ್ರ ಶಸ್ತ್ರಾಭ್ಯಾಸ ಮಾಡ್ತಾ ಇದ್ದಿದ್ದರ ಫಲವಾಗಿ ಕೆಲಸ ಕಮ್ಮಿಯಿದ್ರೂ‌ ಅದನ್ನು ಪೂರ್ಣಗೊಳಿಸದೆ ವಾರ ಪೂರ ಕೆಲಸ ಇನ್ನೂ ಮುಗಿದಿಲ್ಲ ಅನ್ನೋ ಯೋಚ್ನೆನೇ ತಲೆಯಲ್ಲಿರ್ತಿತ್ತು. ನನಗೆ ಬ್ಲಾಗಿಂಗ್ lower prirority task ಆಗಿತ್ತು. priority scheduling ಚೆನ್ನಾಗಿಯೇ ನಡೀತಿತ್ತು . ಬ್ಲಾಗ್ ಬರೀಬೇಕು ಅಂತ ಅಂದುಕೊಂಡ್ರೂ projectನ ಯೋಚನೆ ಮನಸ್ಸಿಗೆ ಬಂದಾಗ ಬ್ಲಾಗ್ ಬರೆಯೋ‌ ಯೋಚನೆಯನ್ನು ಅದು preempt ಮಾಡ್ತಿತ್ತು. ಹಾಗಾಗಿ ನನ್ನ ಬ್ಲಾಗ್ starvationಗೆ ಗುರಿಯಾಯ್ತು.

ಈಗ project ಮುಗಿದಿದೆ. ಸಮಯ ಕೂಡ ಇದೆ. ನನ್ನ ಮನಸ್ಸಿಗೆ ಆಲಸಿಯಾಗಿರೋದು ಇಷ್ಟ ಇಲ್ಲ. ಏನಾದ್ರೂ ಮಾಡಬೇಕಲ್ಲ  ಅಂತ ಯೋಚಿಸ್ತಿದ್ದಾಗ ಬ್ಲಾಗ್ ನೆನಪಾಯ್ತು. ಸರಿ ಒಂದು post ಬರೆದುಬಿಡೋಣ ಅಂತ ಬರೆದು ಬಿಟ್ಟೆ. ಮತ್ತೆ ಇನ್ನೊಂದು higher priority task ಎದುರಾಗಬಹುದು. ಮತ್ತೆ ನನ್ನ ಬ್ಲಾಗ್ starvation ಇಂದ ಸೊರಗಬಹುದು. ಏನಾಗುತ್ತೋ ಗೊತ್ತಿಲ್ಲ . ಆದ್ರೆ ಬ್ಲಾಗ್ update ಮಾಡ್ಲಿಲ್ಲ ಅಂದ್ರೆ ಏನೂ ಬರೀಲಿಲ್ಲ ಅನ್ನೋ ಕೊರಗು ಮಾತ್ರ ನನ್ನಲ್ಲಿರುತ್ತೆ.

ಈಗ ಬ್ಲಾಗ್, project ಎಲ್ಲದಕ್ಕಿಂತ  ತುಂಬಾ ತುಂಬಾ ಜಾಸ್ತಿ priority ಇರೋ‌ task......ಅಂದ್ರೆ - ನನ್ನ ಊಟ ಕರೀತಿದೆ...ಹೋಗ್ಬೇಕು.... ಮತ್ತೊಮ್ಮೆ ಸಿಗ್ತೀನಿ ಆಯ್ತಾ?