Sunday, September 13, 2009

ಏಕೆ ಹೀಗಾಯ್ತೋ......

ಈ ಸೆಮಿಸ್ಟರಿನ ಮೊದಲನೆ analog communication lab ಅಲ್ಲಿ amplitude modulation using collector modulation technique ಅನ್ನೊ experiment ಮಾಡಬೇಕಿತ್ತು. ೨ ಗಂಟೆ ಪ್ರಯತ್ನ ಪಟ್ರೂ output ಅಲ್ಲಿ ಬರೀ noise ಕಾಣಿಸ್ತಿತ್ತು. ಆಗ ನನ್ನ lab partner ನಯನ ಮತ್ತೆ ನಾನು "ಏಕೆ ಹೀಗಾಯ್ತೋ ನಾವು ಕಾಣೆವು " ಅಂತ ಹಾಡೋಕೆ ಶುರು ಮಾಡಿದ್ವಿ. ಆಮೇಲೆ ಅದನ್ನೆ ಮುಂದುವರೆಸುವ ಅನ್ನೋ ಯೋಚ್ನೆ ಬಂತು. ಅಂತೂ ಇಂತೂ ನಮ್ಮ ಮೊದಲ ಅಣಕವಾಡನ್ನು ಬರೆದು ಮುಗಿಸಿದ್ವಿ. ಅದೇ ಧಾಟಿಯಲ್ಲಿ ಹಾಡಿಕೊಳ್ಳಿ.

ಚಿತ್ರ: ಅಂಜದ ಗಂಡು
ಸಂಗೀತ : ಹಂಸಲೇಖ
ಹಾಡು: ಏಕೆ ಹೀಗಾಯ್ತೋ ನಾನು ಕಾಣೆನು

ಆರ್. ಎನ್. ಜಯಗೋಪಾಲ್ ಹಾಗೂ ಹಂಸಲೇಖ ಅವರ ಕ್ಷಮೆ ಕೋರುತ್ತಾ ಇಲ್ಲಿ ಪ್ರಕಟಿಸುತ್ತಿದ್ದೇನೆ..

ಏಕೆ ಹೀಗಾಯ್ತೋ ನಾನು ಕಾಣೆನು
ಏಕೋ ಮನದಲ್ಲಿ doubtಉ ಶುರುವಾಯ್ತೋ
bread board ಮೇಲಿನ circuit ಅಂತು ಬೊಂಬಾಟಾಗಿತ್ತೋ
ಏನೇ ಆದರೂ output ಮಾತ್ರ ಕಾಣದಾಯಿತೋ || ಏಕೆ ಹೀಗಾಯ್ತೋ ||

ಈ circuitiನಲಿ ಅದು ಏನಿದೆಯೋ
sir ಕೊಟ್ಟಂಗೆನೆ components ಇದೆಯೋ|| ಬ್ರೆಡ್ ಬೋರ್ಡ್ ||


ಈ resistru.... designಗೆ ತಕ್ಕಂತೆ ನಾನು ಹುಡುಕಾಡಿ ತಂದೆ
ಈ transistru... emitteru- collectoru ಬೇಸು ಚೆಕ್ ಮಾಡಿ ತಂದೆ
ತಲೆಯಂತು ಕೆಟ್ಟು ಹೋಯಿತು
ಬೇರೇನು ತೋಚದಾಯಿತು
ಮನದಲ್ಲಿ ನಿರಾಸೆ ತುಂಬಿ ಹೋಯಿತು.... || ಏಕೆ ||


ಈ components... check ಮಾಡಿ test ಮಾಡಿ ನಾನಂತೂ ಸುಸ್ತಾದೆ
ಈ IFT... wire ಕಿತ್ತು ಹೋಗಿತ್ತಂತ ನಾನಾಗ ತಿಳಿದೆ
IFT ಬದಲು ಆಯಿತು
outputಉ clearಉ ಆಯಿತು
circuitಉ ಕೊನೆಗೂ debug ಆಯಿತು .....|| ಏಕೆ ||

14 comments:

  1. ha ha ha!
    Analog communication lab andre heegene !
    yaake haagaagatte anta yaargu gotagalla!

    ReplyDelete
  2. ಕ್ಲಾಸಿನಲ್ಲೂ ಲ್ಯಾಬಿನಲ್ಲೂ ನಿಮ್ಮ ಮನರಂಜನೆ ಆಟ ಚೆನ್ನಾಗಿದೆ.....
    ಲ್ಯಾಬ್ ಗಳಲ್ಲಿ output ಬರಲಿಲ್ಲ ಅಂದ್ರೆ ಹಾಗೆ ತಲೆ ಕೆಟ್ಟು ಹೋಗುತ್ತೆ...

    ReplyDelete
  3. ಮೊನ್ನೆ transistor mixer ಮಾಡೋವಾಗ್ಲೂ ಹೀಗೆ ಆಯ್ತು... ಇದ್ದ ಎಲ್ಲ components ನೂ ಬದಲಾಯಿಸಿದ್ವಿ. ೨ ಸಲ CRO ಬದಲಾಯಿಸಿದ್ವಿ. ಅದನ್ನ ನೋಡಿ ನಮ್ lecturer ಏನು ಲ್ಯಾಬಲ್ಲಿರೋ CROನೆಲ್ಲ ಬಳಸಬೇಕು ಅಂತ ಅಂದುಕೊಂಡಿದ್ದೀರ ಹೇಗೆ ಅಂತ ಇದ್ರು... ನಾವು CROದಲ್ಲಲ್ಲ ತೊಂದ್ರೆ ಇರೋದು..ತೊಂದ್ರೆ ಇರೋದು signal generator ಅಲ್ಲಿ ಅಂತ ಹೇಳಿದ್ರು ಕೇಳದೆ ಮತ್ತೆ CRO ಬದಲಾಯಿಸೋಕೆ ಹೇಳಿದ್ರು. ಮತ್ತೆ ಹೊಸ CRO...ಅದರಲ್ಲೂ ಅದೇ problem... ಬೇರೆ signal generator ಬಳಸಿದಾಗ output ಬಂತು.. :)

    ReplyDelete
  4. short circuit ಅಲ್ಲ wire ಕಿತ್ತು ಹೋಗಿತ್ತು ಅಂತ ಅಂದ್ನಲ್ಲ... ಅದಕ್ಕೆ open circuit story :)

    ReplyDelete
  5. ಶಾರ್ಟ್ circuito , ಓಪನ್ circuit ಓ ಒಟ್ನಲ್ಲಿ ಒಂದು ಒಳ್ಳೆ ಹಾಡನ್ನ ಇಷ್ಟು ಚೆನ್ನಾಗಿ ವೈರಿಂಗ್ ಮಾಡಿ... resitru , transistru ಅಂತ component ಹಾಕಿ .. ಇಂಥ ಒಳ್ಳೆ ಹಾಡನ್ನ ತಿರುಚಿದ್ದಿರಲ್ಲ ನಿಜವಾಗಲು ಹಾಡುಬರೆದವರು ಕ್ಷಮಿಸುತ್ತರೋ ಇಲ್ವೋ dobut .... :-)

    ReplyDelete
  6. ಅಹಾ! ಬೇಸರವಾದಾಗ ಹೀಗೆ ಪ್ರಯೋಗ ಒಂಥರ ಮಜ ಕೊಡುತ್ತೇ...ಓದಿ ನಗುಬಂತು. ಚೆನ್ನಾಗಿದೆ...

    ReplyDelete