Wednesday, June 2, 2010

ದಾರಿ ಹುಡುಕಬೇಕಿದೆ...

ಮನಸಿನ ಎಲ್ಲಾ ಮಾತುಗಳು
ಮೌನದ ಮುಸುಕಿನಲ್ಲೇ ಜೀವಿಸುತ್ತಿದ್ದಾಗ
ಅವುಗಳಿಗೆ ಅಕ್ಷರ ರೂಪ ಕೊಡಬಲ್ಲೆನೆಂಬ
ಆಶಾಭಾವನೆಯಿಂದ ಬರೆಯಲಾರಂಭಿಸಿದೆ.
ಆದರೆ ನನಗೀಗ ಅನಿಸುತಿದೆ
ತೋಚಿದ್ದನ್ನೆಲ್ಲಾ ನಾ ಬರೆಯಲಾರೆನೆಂದು
ಕೆಲವು ತುಸು ಗಂಭೀರ‍..ಹಲವು ತೀರಾ ಬಾಲಿಶ
ಕೆಲವೋ ಅರ್ಥವಿಲ್ಲದ ದಿಕ್ಕಿಲ್ಲದ ಆಸೆಗಳು....
ಮನಸಿನೊಳಗಿರುವುದನ್ನು ನಾನು ಹಂಚಿಕೊಳ್ಳಬೇಕಿದೆ
ಆದರೆ ಅವುಗಳನ್ನು ಅಕ್ಷರಗಳಲ್ಲಿ ಬಂಧಿಸಲಾರೆ...
ಭಾವಗಳನ್ನು ಬಂಧನದಿಂದ ಮುಕ್ತಗೊಳಿಸಬೇಕಿದೆ
ಆದರೆ ಅದಕ್ಕೊಂದು ದಾರಿಯನ್ನು ಹುಡುಕಬೇಕಿದೆ...

6 comments:

  1. ಮಳೆಯ ನೀರು ದಾರಿ ಹುಡುಕುವದಿಲ್ಲ ಅದು ದಾರಿ ಮಾಡಿಕೊ೦ಡು ನುಗ್ಗುತ್ತೆ. ಸ್ವಲ್ಪ ನೀರು ಇ೦ಗುತ್ತೆ, ಸ್ವಲ್ಪ ಆವಿಯಾಗುತ್ತೆ, ಸ್ವಲ್ಪ ಮಡುಗಟ್ಟುತ್ತೆ, ಸ್ವಲ್ಪ ಹರಿಯುತ್ತೆ, ಹೆಚ್ಚಿನದು ಗಮ್ಯ ಸೇರುತ್ತೆ. ಮಳೆ ದೊಡ್ಡದಾಗಲಿ, ಸಣ್ಣದಾಗಲಿ, ಚಿಟಿಪಿಟಿಯಾಗಲಿ, ಧೋ ಎ೦ದಾಗಲಿ, ಅಥವಾ ಯಾವದೇ ಕಟ್ಟು ಪಾಡಿನಲ್ಲಿ ಇರುವದಿಲ್ಲ, ಹನಿಸಿ ದಾರಿ ಮಾಡಿಕೊ೦ಡು ಹರಿವ ಪ್ರಯತ್ನ ಅದರ ಕಾಯಕ. ಇ೦ಗಿ, ಆವಿಯಾಗಿ, ಮಡುಗಟ್ಟಿ ಗಮ್ಯ ಸೇರುತ್ತೋ ಬಿಡುತ್ತೋ ಅದು ಅದರ ವಿಧಿಲಿಖಿತ. ಹಾದಿ ಮಾಡಿಕೊ೦ಡು ಭಾವನೆಗಳು ಹರಿಯಲಿ.
    ಚೆ೦ದದ -ಮನದ ತುಮುಲದ ಕವನ!

    ReplyDelete
  2. ಅಸಹಾಯಕತೆ ಬೇಡ. ಎಲ್ಲದಕ್ಕೂ ಬರೆಯುವುದೊಂದೇ ದಾರಿಯಲ್ಲ.. ಗಾಢವಾದ ಭಾವನೆಗಳನ್ನು ಬರೆದು ಹಂಚಿಕೊಳ್ಳುವುದಕಿಂತ ಆತ್ಮೀಯರಾದ ಗೆಳೆಯರಲ್ಲೋ, ಮನೆಮಂದಿಯ ಜೊತೆಗೋ ಹಂಚಿಕೊಳ್ಳಿ.ಅವರಲ್ಲಿ ಸಿಗುವಷ್ಟು ಸ್ಪಂದನ ಅಕ್ಷರ ರೂಪದಲ್ಲಿ ಇಳಿಸಿದರೆ ಸಿಗುವುದೋ ನಾ ಕಾಣೆ..

    ಇಷ್ಟಕ್ಕೂ ನಾವು ಬರೆಯಬೇಕಾದದ್ದು 'ಬರೆಯಬೇಕು' ಅಂತ ಅನ್ನಿಸಿದಾಗ ಅಲ್ಲ, ಬರೆಯದೇ ಇರಲು ಸಾಧ್ಯವೇ ಇಲ್ಲ ಅಂತ ಅನ್ನಿಸಿದಾಗ..

    ಅಂದ ಹಾಗೆ as usual , ಕವನ ಚನ್ನಾಗಿದೆ :-)

    ReplyDelete
  3. u r right.. manassina ella maatugalanna bareyalu sadyavilla..

    ReplyDelete
  4. ಮನಸ್ಸಿನಲ್ಲಿ ಏನ್ ಇರುತ್ತೋ ಅದನ್ನ ಹಂಚಿಕೊಂಡರೆ ಏನೋ ಸಮಾದಾನ.
    ಚೆನ್ನಾಗಿದೆ ನಿಮ್ಮ ಮನದ ಸಾಲುಗಳು.
    ನಿಮ್ಮವ,
    ರಾಘು.

    ReplyDelete
  5. @ಸೀತಾರಾಮ ಕೆ.
    ಹಾದಿ ತನ್ನಿಂತಾನೆ ತೆರೆದುಕೊಳ್ಳಲಿ ಅಂತ ಕಾಯದೆ ಹಾದಿ ಮಾಡಿಕೊಂಡು ಮುನ್ನುಗ್ತೀನಿ ಆಯ್ತಾ :)
    @ ವಿನಾಯಕ ಕುರುವೇರಿ
    ಹೌದು ಆಪ್ತರೊಂದಿಗೆ ಮನಸಿನ ತುಮುಲಗಳನ್ನು ಹಂಚಿಕೊಳ್ಳುವಾಗ ಉಂಟಾಗುವ ನಿರಾಳ ಭಾವ ಅಪರೂಪದ್ದು
    @Manju Bhat
    :)
    @ರಾಘು
    ಧನ್ಯವಾದಗಳು....

    ReplyDelete
  6. ಹೌದು .. ನಿಮ್ಮ ಮಾತು ಅಕ್ಷರಶಃ ನಿಜ.. ಕೆಲವೊಮ್ಮೆ ಎಲ್ಲವನ್ನು ಗೀಚಿ ಬಿಟ್ಟು ನಿರಾಳವಾಗಿರಬೇಕು ಅನ್ಸುತ್ತೆ. ಆದ್ರೆ ಮನಸ್ಸು ಅದಕ್ಕೊಪ್ಪುವುದಿಲ್ಲ.. ಎಲ್ಲವನ್ನು ಬರೆಯುವುದಕ್ಕೆ ಆಗದು.

    ReplyDelete