Friday, June 4, 2010

ನೀನ್ಯಾರೋ???

ಪರಿಚಯಕ್ಕೂ ಮೊದಲೇ ನನ್ನ
ಸೆಳೆದುಕೊಂಡು ನಿನ್ನ ಕಡೆಗೆ
ನನ್ನ ಗೆದ್ದ ಜಾದುಗಾರ ನೀನ್ಯಾರೋ?

ನನ್ನ ಮನದಂಗಳಕ್ಕೆ ಇಣುಕಿ
ಮಧುರ ತರಂಗಗಳನೆಬ್ಬಿಸಿ
ಮನವ ಕದಡಿದ ಪೋರ ನೀನ್ಯಾರೋ?

ಕಣ್ಣ ರೆಪ್ಪೆಯನ್ನು ಮುಚ್ಚಿದ್ದರೂ
ನೆನಪಾಗಿ ನನ್ನ ಬಿಡದೆ ಕಾಡಿ
ನಿದ್ರೆ ದೂರ ಮಾಡಿದ ತುಂಟ ನೀನ್ಯಾರೋ?

ಬೇಕು ಎಂದು ನನ್ನ ಕೂಡದೆ
ಬೇಡವೆಂದು ದೂರ‍ ದೂಡದೆ
ಹತ್ತಿರವಿದ್ದೂ ದೂರ ನಿಲ್ಲೋ ಗೆಳೆಯ ನೀನ್ಯಾರೋ?

ಕಷ್ಟ ಸುಖದಿ ಜೊತೆಗೆ ನಿಂತು
ನನ್ನ ತುಂಬಾ ನೀನೇ ತುಂಬಿ
ಹೆಸರ ತಿಳಿಸದ ಚೋರ ನೀನ್ಯಾರೋ?

14 comments:

  1. ಇದ್ಯಾರೋ ತುಂಬಾನೇ ಸತಾಯಿಸಿರೋ ಹಾಗಿದೆ? :-) ಮೊನ್ನೆವರೆಗೂ ಸ್ಯಾಡ್ ಸಾಂಗ್ಸ್ ಹಾಡ್ತಾ ಇದ್ದವರು ರಮ್ಯ ಚೈತ್ರ ಕಾಲಕ್ಕೆ ತೆರಳಿಬಿಟ್ಟಿದ್ದೀರಾ :)

    anyways , ಕವನ ಸಕ್ಕತ್..
    "ಹತ್ತಿರವಿದ್ದೂ ದೂರ ನಿಲ್ಲೋ ಗೆಳೆಯ ನೀನ್ಯಾರೋ?" - ಇಂಥ ಗೆಳೆಯರು ಬೇಕು ರೀ ಬದುಕಿನಲ್ಲಿ..

    ReplyDelete
  2. @ ವಿನಾಯಕ ಕುರುವೇರಿ
    ನಾನು ಸ್ಯಾಡ್ ಸಾಂಗ್ಸ್ ಹಾಡ್ತಾ ಇರ್ಲಿಲ್ಲ.... ಪರೀಕ್ಷೆ ಸಮಯ ಅಲ್ಲ ಅದಕ್ಕೆ ಗೊಂದಲಗಳ ನಡುವೆ ಇದ್ದೆ ಅಷ್ಟೆ.... ಈಗ ಪರೀಕ್ಷೆ ಮುಗೀತು ರಜ ಬಂತು ಇನ್ನೇನು ರಮ್ಯ ಚೈತ್ರ ಕಾಲಾನೇ....

    ಹೌದ್ರೀ ಕಣ್ಣಿಗೆ ಕಾಣಿಸಿಕೊಳ್ಳದೇ ಸತಾಯಿಸ್ತಾ ಇದ್ದಾನೆ... ಯಾರು ನೀನು ಅಂದ್ರೆ ಇನ್ನೊಂದೆರಡು ಮೂರು ವರ್ಷ ಕಾಯ್ತಾ ಇರು ಹೇಳ್ತೀನಿ ಅಂತಿದ್ದಾನೆ :)

    ReplyDelete
  3. ಹ್ಮ್ಮ್ಮ್ ,ಶುರುವಾಗಿದೆ ಸುಂದರ ಕನಸು ,ಅದ ಮೀರಿದೆ ................... :)

    ReplyDelete
  4. ನಿಜಕ್ಕೂ ಅವನು ಜಾದೂಗಾರನೇ!ನಿಮಗೆ ಚೆನ್ನಾಗಿ ಮೋಡಿ ಮಾಡಿದ್ದಾನೆ!

    ReplyDelete
  5. ಇಂದುಶ್ರೀ
    ಅವನ್ಯಾರೋ?
    ನಿಮ್ಮ ಕಾಡಿದವನು?
    ಚೆನ್ನಾಗಿದೆ ಕವನ
    ಕದ್ದು ಕದ್ದು ಹಾಡು ನೆನಪಿಗೆ ಬಂತು

    ReplyDelete
  6. @ ಸೀತಾರಾಮ್ ಕೆ.
    @ Raghu
    @ Sunil
    ಧನ್ಯವಾದಗಳು

    @‌ವಿನಯಣ್ಣಾ
    ಕನಸು ಶುರುವಾಗಿದೆ.... ಆದ್ರೆ ನನಸಾಗೋಕೆ ತುಂಬಾ ದಿನ ಬೇಕು :)
    @ ಡಾ.ಕೃಷ್ಣಮೂರ್ತಿ.ಡಿ.ಟಿ.
    :)
    @ ಡಾ. ಗುರುಮೂರ್ತಿ ಹೆಗಡೆ
    ನಾನು ಅದನ್ನೇ ಹುಡುಕ್ತಾ ಇದ್ದೀನಿ ಅದು ಯಾರು ಅಂತ :)

    ReplyDelete
  7. tumba chennagide kavana indushree.. :) tumba ista aitu :) avanyaru kelabahude ;)?

    ReplyDelete
  8. ಕನಸು ತುಂಬಿ ನಿದ್ದೆ ಕದ್ದ ಆ ಕಳ್ಳನ್ಯಾರೋ?
    ಆಸೆ ಹರಿಸಿ ಪ್ರೀತಿ ತುಂಬಿದ ತುಂಟನವನ್ಯಾರೋ?

    ಯಾರ್ ಅಂತ ಗೊತ್ತಾದಾಗ ನಮಗೂ ಹೇಳಿ. ಅವರಲ್ಲಿ ಸ್ವಲ್ಪ ಪ್ರಶ್ನೆ ಕೇಳುವುದಿದೆ!

    ಸುಂದರ ಕವನ......

    ಸಮಯ ಸಿಕ್ಕರೆ ನಮ್ಮ ಕಡೆ ಬನ್ನಿ.........
    http://pravi-manadaaladinda.blogspot.com

    ReplyDelete
  9. indushree madam,
    tumbaa chennaagide kavana... yaaro sakkattaagi sataayisiddaare anisatte.... innoo sataayisali... idaralli tumbaa sukhavide..

    ReplyDelete
  10. ಆತ್ಮೀಯ
    ಸು೦ದರ ಕವನ. ಆ ಪರಿಚಿತ(ಪರಿಚಯಕ್ಕೂ ಮೊದಲು ಎ೦ದದ್ದರಿ೦ದ, ಈಗ ಅಪರಿಚಿತನಾಗುಳಿದಿಲ್ಲ ಅಲ್ಲವೇ?) ಹುಡುಗನ ಬಗ್ಗೆ ನಿಮ್ಮ ಕನಸು ಕವನ ಅದ್ಭುತ. ನಿಮ್ಮ ಕವನಕ್ಕೊ೦ದು ಪ್ರತಿ ಕವನ (ತಪ್ಪು ತಿಳಿಯ ಬೇಡಿ)

    ಕ೦ಡ ಮೊದಲ ನೋಟದಲ್ಲೇ
    ಪರಿಚಿತಳಾಗಿಬಿಟ್ಟೆ ನನಗೆ
    ಏಕೆ೦ದು ಕೇಳದಿರು ಗೆಳತಿ

    ಮಿ೦ಚು ಕ೦ಗಳ ಕೊಳದಲ್ಲೇ
    ನಿನ್ನ ಮನದ ಬೆಳಕ ಕ೦ಡೆ
    ಏಕೆ೦ದು ಕೇಳದಿರು ಗೆಳತಿ

    ನಿನ್ನ ನೆನಪಾಗುಳಿಯುವ
    ಆಸೆಯಿಲ್ಲ ಎನಗೆ
    ಏಕೆ೦ದು ಕೇಳದಿರು ಗೆಳತಿ

    ದೂರವಿದ್ದು ನಿನ್ನ ಕಾವ್ಯ
    ಪ್ರತಿಭೆ ಕಾಣಬೇಕೆ೦ಬ ಆಸೆ
    ಏಕೆ೦ದು ಕೇಳದಿರು ಗೆಳತಿ

    ಹೆಸರೊಳಗೇನಿದೆ ಬಿಡು, ನಿನ್ನ ಮನಕೆ
    ನನ್ನ ನೆನಪು,ಸಾ೦ತ್ವನ,ನಗುವನ್ನೀಯುವುದಾದರೆ
    ನಾ ಅನಾಮಿಕನಾಗಿರುವೆ ಗೆಳತಿ

    ಹರೀಶ ಆತ್ರೇಯ

    ReplyDelete
  11. @ Snow White
    @ ಪ್ರವೀಣ್
    ಹೆಸರು ಗೊತ್ತಾದ ತಕ್ಷಣ ಎಲ್ಲರಿಗೂ ನನ್ನೀ ಬ್ಲಾಗಿನ ಮೂಲಕ ತಿಳಿಸ್ತೀನಿ ಸರೀನಾ...
    @ ವಸಂತ್
    @ ದಿನಕರ
    ಧನ್ಯವಾದಗಳು...
    @ ಹರೀಶ್ ಆತ್ರೇಯ
    ನಾನು ನಿಮ್ಮ ಕವಿತೆಗಳ ಅಭಿಮಾನಿ ಬಿಡ್ರಿ... ನಿಮ್ಮ ಕವಿತೆ ಸೂಪರ್...
    ಆದ್ರೆ ಅವನು ಪರಿಚಿತನಲ್ಲ. ಇನ್ನೂ ಪರಿಚಯ ಆಗಿಲ್ಲ... :)

    ReplyDelete