Thursday, July 1, 2010

ಮೊಗ್ಗಿನ ಮನಸು

ಸಂಜೆಯ ತಂಗಾಳಿಗೆ
ತನ್ನನ್ನೊಡ್ಡಿ ನಿಂತ ಮೊಗ್ಗು
ಮಾಸದ ನಗೆಯೊಂದಿಗೆ
ನಾಳೆಗೆ ಕಾದಿದೆ.

ಇರುಳ ಬೆಳದಿಂಗಳಾಟ
ರವಿಯ ಹೊಂಗಿರಣ ಸ್ಪರ್ಶ
ಕಚಗುಳಿಯಿಡುವ ಮಳೆ
ಕನಸಿನ ತೇರು ಹೊರಟಿದೆ.

ನಾಳೆಯನಿಂದೇ ಕಂಡವರ್ಯಾರು?
ಕನಸಿಗೆ ಬೇಲಿ ಕಟ್ಟುವರ್ಯಾರು?
ನಾಳೆಯ ಗೆಲ್ಲುವ ಛಲವೊಂದಿರಲು
ಹೂವಿನ ನಗುವನು ಕಸಿಯುವರ್ಯಾರು?

6 comments:

  1. ಮೊಗ್ಗಿನ ಮನಸ್ಸನ್ನು ಅರಿತ೦ತೆ ಬರಿದಿದ್ದೀರಿ ಇ೦ದುಶ್ರ್ರೀ..ನಾಳೆಯ ಗೆಲ್ಲುವ ಛಲ..ನಿಮಗೂ ಬರಲಿ..ಎಲ್ಲ ನಾಳೆಗಳೂ ಗೆಲುವನ್ನೇ ತರುತಿರಲಿ..

    ಅನ೦ತ್

    ReplyDelete
  2. ಇಂದುಶ್ರೀ ಯವರೇ..
    ನಿಜ.. ಕನಸುಗಳ ತೇರು ಹೊರಡುತ್ತಲೇ ಇರಬೇಕು.. ಗೆಲ್ಲುವ ಛಲ ಇದೆ ಅಂತಾದ್ರೆ ನಾಳಿನ ನಮ್ಮ ನಗುವನ್ನ ಕಸಿಯೋಕೆ ಯಾರಿಂದಲೂ ಸಾಧ್ಯವಿಲ್ಲ.. ಕವನ ಇಷ್ಟವಾಯ್ತು...

    ದಿಲೀಪ್ ಹೆಗಡೆ

    ReplyDelete
  3. ಮೊಗ್ಗಿನ ಆ೦ತರ್ಯದಲ್ಲಿನ-ನಾಳಿನ ಬದುಕ ಸೊಗಡ ಚೆನ್ನಾಗಿ ಹಿಡಿದು ಇಟ್ಟಿದ್ದಿರಾ!
    ಓದಿದ ಜನರಾರು ಮೊಗ್ಗನ್ನು ಕಿಳಲಾರರು!
    ಚೆಂದದ ಕವನ!

    ReplyDelete
  4. ಎಂದಿನಂತೆ ಒಳ್ಳೆಯ ಉಪಮೆ. ಕೊನೆಯ ಪ್ರಶ್ನೆ ಮಾರ್ಮಿಕ. ಹೂವಿನ ನಗುವನು ಕಸಿಯುವರ್ಯಾರು? ಅದು ಛಲವೋ, ವಿಧಿಯೋ ಗೊತ್ತಿಲ್ಲ, ನಮಗಂತೂ ಒಂದು ಒಳ್ಳೆಯ ನೀತಿ ಪಾಠವೇ.
    ಅಂದಹಾಗೆ ಬ್ಲಾಗ್ ದಿನಕ್ಕೆರಡು ಬಾರಿ ಬಣ್ಣ ಬಣ್ಣಗಳಿಂದ ನಳನಳಿಸಲು ಶುರುವಾಗಿದೆ? :-)

    ReplyDelete
  5. ಒಳ್ಳೆಯ ಕವನ ಇಂದುಶ್ರಿ...ಚೆನ್ನಾಗಿ ಇದೆ...

    ReplyDelete
  6. @ ಅನಂತರಾಜ್
    @ ದಿಲೀಪ್ ಹೆಗ್ಡೆ
    @ ಸೀತಾರಾಮ ಕೆ.
    @ ಗುರು
    ಧನ್ಯವಾದಗಳು
    @ ವಿನಾಯಕ
    ಈಗ ರಜೆಯಲ್ವಾ... ಮಾಡೋಕೆ ಬೇರೆ ಕೆಲ್ಸ ಇಲ್ಲ. ಯಾವುದು ಚೆನ್ನಾಗಿ ಕಾಣುತ್ತೆ ಅಂತ ನೋಡ್ತಾ ಇದ್ದೀನಿ ಅಷ್ಟೇ... :)

    ReplyDelete