Friday, July 2, 2010

ಪಯಣ

ಅಂತ್ಯವಿರದ ಹಾದಿಯಲ್ಲಿ
ದಿಗಂತದಾಚೆಗಿನ ಊರಿಗೆ
ವಿಶ್ರಾಂತಿಯಿಲ್ಲದ ಪಯಣ

ನೂರಾರು ಕವಲುಗಳು
ಹಲವಾರು ಯೋಚನೆಗಳು
ಹೊಸ ಲೋಕದನಾವರಣ

ದಾರಿ ತೋರುವ ಫಲಕಗಳಿಲ್ಲ
ಹೆಜ್ಜೆಗುರುತುಗಳ ಸುಳಿವಿಲ್ಲ
ನನ್ನದೇ ಹಾದಿಯ ಅನ್ವೇಷಣೆ

ಎದುರುಗೊಂಡ ಹಲವಾರು ಮುಖಗಳು
ಮುಗುಳ್ನಗೆಯೇ ಮಾತು
ಹೆಸರಿಲ್ಲದ ಸಂಬಂಧದಂಕುರ

ಜೊತೆಜೊತೆಗೆ ಕೆಲವು ಹೆಜ್ಜೆ
ಸವಿ ಮಾತ ಮಕರಂದ
ಸ್ನೇಹದಮೃತ ಸಿಂಚನ

ಕ್ರಮಿಸಿರುವುದೆರಡೇ ಮೈಲಿ
ಗಮ್ಯವಿನ್ನೂ ಬಹುದೂರ
ಗುರಿಯೆಡೆಗಿನ ನಡಿಗೆ ನಿರಂತರ

13 comments:

  1. ಇಂದುಶ್ರೀ ಯವರೇ ಕವನ ತುಂಬಾ ಚೆನ್ನಾಗಿದೆ.'ಅಲ್ಲಿದೆ ನಮ್ಮ ಮನೆ,ಇಲ್ಲಿರುವುದು ಸುಮ್ಮನೇ'ಎನ್ನುವ ಸಾಲುಗಳು ನೆನಪಿಗೆ ಬಂದವು.ನನ್ನ ಬ್ಲಾಗಿಗೂ ಭೇಟಿ ಕೊಡಿ.ನಮಸ್ಕಾರ.

    ReplyDelete
  2. ಸೊಗಸಾದ ಕವನ..
    ಚೆನ್ನಾಗಿದೆ...

    ReplyDelete
  3. ಪಯಣ ನಿರಂತರವಾಗಿರಲಿ..ನಿಲ್ಲದಿರಲಿ ಗುರಿ ಮುಟ್ಟುವ ತನಕ..!
    ನಿಮ್ಮವ,
    ರಾಘು.

    ReplyDelete
  4. ಎತ್ತ ಸಾಗಿದೆ ಪಯಣ ಅದು ಎಷ್ಟು ದೂರ?
    ಕೊನೆ ಇಲ್ಲದ ಪಯಣ ಸಾಗಿದೆ ಆ ತೀರ ಈ ತೀರ............

    ಎಂದೂ ಮುಗಿಯದ ಬದುಕಿನ ಪಯಣ ನಿರಂತರ,
    ಚೆನ್ನಾಗಿದೆ ಕವನ........

    ReplyDelete
  5. namma payaNada guttu ide.... ellige anta gottiralla, heege horadutteve.....

    sundara kavanakke abhinandane....

    ReplyDelete
  6. wow :) awesome lines..tumba chennagide indu :)

    ReplyDelete
  7. ಚೆನ್ನಾಗಿದೆ ಪುಟ್ಟ ನಿನ್ನ ಈ ೫೦ ನೇ ಪೋಸ್ಟ್ .
    (ಮಕರಂದ)
    ಇದು ಮಕರಂಧ ಅನ್ಸುತ್ತೆ ಅಲ್ವಾ?

    ReplyDelete
  8. ಬದುಕಿನ ಪಯಣದ ಹಾದಿಯನ್ನು ಚೆನ್ನಾಗಿ ವಿವರಿಸಿದ್ದೀರ.

    ReplyDelete
  9. @ ಡಾ ಡಿ.ಟಿ.ಕೆ.. ಮೂರ್ತಿ
    ನಿಮ್ಮ ಬ್ಲಾಗ್ ನೋಡಿದೆ. ನಿಮ್ಮ ಲೇಖನಗಳೆಲ್ಲಾ ಚೆನ್ನಾಗಿವೆ
    @ಸವಿಗನಸು
    @ರಾಘು
    @ಪ್ರವೀಣ್
    @ದಿನಕರ
    @Snow white
    @ವೆಂಕಟಕೃಷ್ಣ
    @ಸೀತಾರಾಮ ಕೆ.
    @ಡಾ. ಗುರುಮೂರ್ತಿ
    @ವಿ.ಆರ್. ಭಟ್
    ಧನ್ಯವಾದಗಳು
    @ ವಿನಯಣ್ಣ
    ಇಲ್ಲ ಅದು ಮಕರಂದ

    ReplyDelete
  10. ಜೀವನ ಪಯಣ., ತುಂಬಾ ಚೆನ್ನಾಗಿದೆ....

    ReplyDelete