Sunday, November 7, 2010

ನಿನ್ನೆ ನಾಳೆಗಳ ನಡುವೆ

ನಿನ್ನೆಯ ನೆನಪು ಅಚಲ
ಯಾರೋ ಕಟ್ಟಿ ಬಿಟ್ಟು ಹೋದ
ಕೋಟೆಯಂತ
ಚಂಡಮಾರುತಗಳಿಗೂ ಜಗ್ಗದ
ಬಂಡೆಕಲ್ಲಿನಂತೆ

ನಾಳೆಯ ಕನಸು ಮಧುರ
ಎಲ್ಲಿಂದಲೋ‌ ಪರಿಮಳ ಸೂಸುವ
ಸೂಜಿಮಲ್ಲೆಯಂತೆ
ಜೀವನೋತ್ಸಾಹ ತುಂಬಿ ತರುವ
ಭರವಸೆಯ ಬೆಳಕಂತೆ

ಆದರೇನು
ನೆನಪು ನೂರು ಕಾಡಲು
ಸಮಯ ಮರಳಿ ಬರುವುದೇ?
ಕನಸು ನೂರು ಕೂಡಲು
ಬಾಳ ಕೀಲಿ ಸಿಗುವುದೇ?

ನಿನ್ನೆಗಳ ಸಾಗರದೊಳಗೆ ಮುಳುಗಿ
ನಾಳೆಯ ದಂಡೆ ಸೇರುವ ಅಪೇಕ್ಷೆ
ನಿನ್ನೆಯ ಸಂಕೋಲೆಗಳೊಳಗೆ
ನಾಳೆಯ ಸ್ವಾತಂತ್ರ್ಯದ ನಿರೀಕ್ಷೆ

ಬದುಕು ಸಾಗುವುದು
ಕಳೆದು ಹೋದ ನಿನ್ನೆಯಲ್ಲೂ‌ ಅಲ್ಲ
ಮುಂಬರುವ ನಾಳೆಯಲ್ಲೂ‌ ಅಲ್ಲ
ನಿನ್ನೆ ನಾಳೆಗಳ ನಡುವ ಕೊಂಡಿಯಲ್ಲಿ
ಇಂದಿನ ದಿನದ ಬೆಚ್ಚಗಿನ ಗೂಡಿನಲ್ಲಿ

ನಿನ್ನೆಯ ಸೆರಗು ಸರಿಸಿ ಅರಳಿದ
ಇಂದಿನ ಸುಮವಿದು ಕಂಪ ಬೀರಲಿ
ನಿನ್ನೆಯ ಬುನಾದಿಯ ಮೇಲೆ
ನಾಳೆಯ ಮಹಲು ಕಟ್ಟುವ
ಇಂದಿನ ಕೆಲಸ ಕೈಗೂಡಲಿ

9 comments:

  1. ನಿನ್ನೆಯ ಸಂಕೋಲೆಗಳೊಳಗೆ ನಾಳೆಯ ಸ್ವಾತಂತ್ರ್ಯದ ನಿರೀಕ್ಷೆ. ತುಂಬಾ ಚೆನ್ನಾಗಿರುವ ಸಾಲುಗಳು.

    ReplyDelete
  2. ನಿನ್ನೆ ನಾಳೆಗಳ ಮಧ್ಯ ಇಂದು ಕಳೆಯಬಾರದೆನ್ನುವದನ್ನು ಸೋಗಸಾಗಿಸಿ ಕವನಿಸಿದ್ದಿರಾ...
    ಧನ್ಯವಾದಗಳು.

    ReplyDelete
  3. ಕವನ ತುಂಬಾ ಚೆನ್ನಾಗಿದೆ :)
    ನೆನ್ನೆಗಳನ್ನ ಮೊದಲೇ ಕಲ್ಲು ಬಂಡೆಗಳಿಗೆ ಹೊಲಿಸಿರೋದ್ರಿಂದ ನನಗನ್ನಿಸಿದ್ದು..
    "ನಿನ್ನೆಗಳ ಸಾಗರದೊಳಗೆ ಮುಳುಗಿ
    ನಾಳೆಯ ದಂಡೆ ಸೇರುವ ಅಪೇಕ್ಷೆ"
    ಬದಲು
    "ನೆನ್ನೆಯ ದಂಡೆಯಿಂದ ಹಾರಿ
    ನಾಳೆಯ ಸಾಗರವ ಈಜುವ ಅಪೇಕ್ಷೆ"
    ಅನ್ನೋದು ಸಮಂಜಸ ಅಲ್ವ?
    ಸಾಗರ ಅನ್ನೋದು ವಿಶಾಲತೆಯನ್ನ ಸುಚಿಸೋದ್ರಿಂದ ನಾಳೆ ನಾವು ಸಾಧಿಸಬಹುದಾಗಿರೋದಕ್ಕೆ ಸರಿಹೊಂದತ್ತೆ ಅನ್ನೋದು ನನ್ನ ಅನಿಸಿಕೆ :)

    ReplyDelete
  4. @ ಮಹೇಶ್ ಭಟ್
    @ಸೀತಾರಾಮ ಕೆ.
    ಧನ್ಯವಾದಗಳು
    @ಅಭಿಜಿತ್ (ಕಾರಣ)
    ನಿನ್ನೆಯನ್ನು ಬಂಡೆಗೆ ಹೋಲಿಸಿದ್ದು ಅದು ಸ್ಥಿರ ,ಬದಲಾಯಿಸಲಾರದ್ದು ಎಂದು ಸೂಚಿಸಲು.
    ಇನ್ನು ನಿನ್ನೆಯ ಸಾಗರವೆಂದರೆ ನಿನ್ನೆಯ ಗೊಂದಲ ಗೊಡವೆಗಳ ಸಾಗರ. ಅಲ್ಲಿಂದ ಸುಂದರ - ಸ್ವಚ್ಛಂದ ದಡದೆಡೆಗೆ ಸಾಗುವ ಅಪೇಕ್ಷೆ

    ReplyDelete
  5. ನಿನ್ನೆಯ ಬುನಾದಿ ಇಲ್ಲದಿದ್ದರೇನಂತೆ
    ಹೊಸ ಬುನಾದಿ ಕಟ್ಟೋಣವಂತೆ

    ReplyDelete
  6. @ Santosh
    The past is ever with us and all that we are and that we have comes from the past. We are its products and we live immersed in it.Not to understand it and feel it as something living within us, is not to understand the present.To combine it with the present and extend it to the future, to break from it where it cannot be so united, to make of all this the pulsating and vibrating material for thought and action --- that is life
    -Jawaharlal Nehru
    so the past is always there... u cannot live without the past.All we have to do is to find the vital links between past and present. The thought conveyed here is that we must not become the prisoners of past but get hold of the gradual change which drives the action at the present.

    ReplyDelete
  7. chandada kavite

    koneya mooru saalugalu yaavattigoo prastuta.

    vandanegalu

    ReplyDelete
  8. indushree madam,
    kavana aashaya jotege padagaLa joDaNe ishTa aaytu....

    ReplyDelete