Tuesday, July 19, 2011

ನೆನಪೇ!

ಕ್ಷಣ ಮಾತ್ರ ಹತ್ತಿರ ಸುಳಿದು
ನಗೆಯರಳಿಸುವ ನೆನಪೇ
ನೀ ನನ್ನ ಸಖನೇ?

ನಗುವಿನಲ್ಲೂ ಅಳುವ
ಹೆಕ್ಕಿ ತೆಗೆವ ನೆನಪೇ
ನೀ‌ ಪರಮ ಸಿನಿಕನೇ?

ಏಕಾಂತದಲಿ ಬೆಂದ ಮನಕೆ
ಸಾಂತ್ವನ ತರುವ ನೆನಪೇ
ನೀನಮೃತಸಿಂಚನವೇ?

ಭೂತದ ಗೋರಿಯ ಮೇಲೆ
ಕುಣಿ ಕುಣಿದಾಡುವ ನೆನಪೇ
ನೀ‌ ಕಾಡುವ ಪಿಶಾಚಿಯೇ?

ಗತದ ಗೋಡೆಗೆ ಬಡಿದು
ಮರಳಿ ಬರುವ ನೆನಪೇ
ನೀ‌ ನನ್ನಾತ್ಮಬಂಧುವೇ?

ಹೆಸರ ಹಂಗಿಲ್ಲದೆ ನನ್ನ
ಬರಸೆಳೆದು ಅಪ್ಪುವ ನೆನಪೇ
ನಮ್ಮದು ದಿವ್ಯ ಅನುಬಂಧವೇ?

6 comments:

  1. ನೆನಪು ಮಧುರ -ಅಳುವಿನಲ್ಲಿ ನಗುವ, ನಗುವಿನಲ್ಲಿ ಅಳುವ ತರುವ ನೆನಪು ಮಧುರ ಮಧುರ... ಚೆಂದದ ಕವನ ಇಂದುಶ್ರೀಯವರೇ

    ReplyDelete
  2. tumbaa chennagide kavana, prashne keli alliye uttara padeyuva shaili adbhuta

    ReplyDelete
  3. well, i don know how good am i to tell,' ನೀ ನನ್ನ ಸಖನೇ?' would have been better..this is one of the best blogs i visit anyway.
    Whatta lines !!great. :)
    "ಗತದ ಗೋಡೆಗೆ ಬಡಿದು
    ಮರಳಿ ಬರುವ ನೆನಪೇ
    ನೀ‌ ನನ್ನಾತ್ಮಬಂಧುವೇ?"

    ReplyDelete
  4. ಒಳ್ಳೆಯ ವ್ಯಾಖ್ಯಾನ ನೀ ಏನು ಎನ್ನುವುದಕ್ಕೆ...? ಧನಾತ್ಮಕ ಮತ್ತು ಋಣಾತ್ಮಕ ಎರಡೂ ಸೇರಿ ಪೂರ್ಣ ಭಾವ... ಇಂದುಶ್ರೀ ಮೆಚ್ಚುಗೆ ಆಯ್ತು.

    ReplyDelete