Monday, July 20, 2009

ನನ್ನನ್ನಿನ್ನು ಕಾಡಬೇಡ

ಚಂದಿರನೆಷ್ಟೇ ಹೊಳೆಯುತ್ತಿದ್ದರೂ
ಬೆಳದಿಂಗಳನ್ನೇ ಚೆಲ್ಲಿದ್ದರೂ
ನೋಡು ಗೆಳೆಯ
ಅರಳುವುದು ಈ ತಾವರೆ
ಸೂರ್ಯ ರಶ್ಮಿ ಸೋಂಕಿದಾಗಷ್ಟೇ

ನೀ ನನ್ನನ್ನೆಷ್ಟೇ ಕೇಳಿದರೂ
ಯಾವ ಪರಿಯಲ್ಲೇ ಕಾಡಿದರೂ
ತಿಳಿದುಕೊ ಗೆಳೆಯ
ನನ್ನ ಬಾಳಸಂಗಾತಿಯ ಆಯ್ಕೆ
ನನ್ನ ತಾಯ್ತಂದೆಯರದಷ್ಟೇ

ಮನದ ಬಾಗಿಲಿಗೆ ಬೀಗ ಹಾಕಿ
ನನ್ನಿಚ್ಛೆಯಿಂದಲೇ ಕೀಲಿ ಕೈಯನ್ನು
ಕೊಟ್ಟುಬಿಟ್ಟಿದ್ದೇನೆ ನಾನವರಿಗೆ
ಈ ಹೃದಯ ಚೂರಾಗುವುದು ಖಚಿತ
ಬೀಗ ಮುರಿಯಲು ಪ್ರಯತ್ನಿಸಿದರೆ

ಹೆಜ್ಜೆ ಹೆಜ್ಜೆಗೂ ಜೊತೆಯಾಗಿ ನಿಂತವರನ್ನು
ಈ ವಿಷಯವಾಗಿ ದೂರ ಮಾಡಿಕೊಳ್ಳಲು
ನನ್ನ ಮನಸು ಒಪ್ಪುತ್ತಿಲ್ಲ
ನನ್ನನ್ನಿನ್ನು ಕಾಡಬೇಡ ಗೆಳೆಯ
ಈ ನನ್ನ ನಿರ್ಧಾರದಲ್ಲಿ ಬದಲಾವಣೆಯಿಲ್ಲ

8 comments:

  1. ಇಂದುಶ್ರೀ,

    ಬಾಳ ಸಂಗಾತಿ ಜೊತೆಯಾದ ಮೇಲು ಈ ಕಾಡುವ ಸಂಗಾತಿಯೇ...

    ನೀ ನನ್ನನ್ನೆಷ್ಟೇ ಕೇಳಿದರೂ
    ಯಾವ ಪರಿಯಲ್ಲೇ ಕಾಡಿದರೂ
    ತಿಳಿದುಕೊ ಗೆಳೆಯ
    ನನ್ನ ಬಾಳಸಂಗಾತಿಯ ಆಯ್ಕೆ
    ನನ್ನ ತಾಯ್ತಂದೆಯರದಷ್ಟೇ

    ಇದೊಂತರ ಚೆನ್ನಾಗಿದೆ ಅನ್ನಿಸಿತು...

    ReplyDelete
  2. ಬಾಳ ಸಂಗಾತಿ ಜೊತೆಯಾದ ಮೇಲು ಈ ಕಾಡುವ ಸಂಗಾತಿಯೇ...
    ಅಯ್ಯೋ ಯಾರ್ರೀ ಅದು ಬಾಳ ಸಂಗಾತಿ ನನ್ನ ಜೊತೆಯಾಗಿರೋದು... ನಂಗೆ ಗೊತ್ತಿಲ್ಲದ ಹಾಗೆ

    ReplyDelete
  3. ಇಂದು ಡಿಯರ್....
    ಯಾವ ಬಾಯ್ ಫ್ರೆಂಡ್ ತಲೆ ತಿಂತ ಇದ್ದಾನೆ? ಇಷ್ಟು polite ಆಗಿ poem ಬರೆದಿದ್ದೀಯ......
    ಹಾ ಹಾ ಚೆನ್ನಾಗಿ ಇದೆ.... ಸೊ exams ಮುಗಿತಾ.... ಹೇಗೆ ಒದ್ಕೊತ ಇದ್ದೀಯ?

    ReplyDelete
  4. exams ಮುಗೀತು...ಬಾಯ್ ಫ್ರೆಂಡ್ ಇದ್ರಲ್ಲ್ವಾ ತಲೆ ತಿನ್ನೋಕೆ... ;)

    ReplyDelete
  5. ತುಂಬಾನೇ ಚೆನ್ನಾಗಿದೆ ಕವನದಲ್ಲಿ ಬಳಸಿದ ಚಂದ್ರ-ತಾವರೆ-ಸೂರ್ಯ ಹಾಗೂ ಬಾಗಿಲು-ಬೀಗ-ಕೀಲಿಯ comparison... ಪಿ.ಇ.ಎಸ್ ಕಾಲೇಜಿನ ಹುಡುಗಿ ಅಂತ ತಿಳಿದು ಇನ್ನೂ ಖುಷಿಯಾಯ್ತು :)
    ಹೀಗೆಯೇ ಸಾಗಲಿ ಬರವಣಿಗೆ - ಅನವರತ!

    ReplyDelete
  6. ಧನ್ಯವಾದಗಳು ದಿವ್ಯಾ....:)

    ReplyDelete