೨೦೦೯ ನನ್ನ ಪಾಲಿಗೆ ತುಂಬ ವಿಶಿಷ್ಟವಾದ /ವಿಚಿತ್ರವಾದ ಯಾವುದೇ ಅನುಭವಗಳನ್ನು ನೀಡಲಿಲ್ಲ.... ಆದ್ರೂ ೨೦೦೯ರಲ್ಲಿ ಆದದ್ದೇನು ಅಂತ ಯೋಚಿಸಿದ್ರೆ ನೆನಪಾಗೋ ವಿಷ್ಯಗಳನ್ನು ಇಲ್ಲಿ ದಾಖಲಿಸುವ ಯತ್ನ...
ತುಂಬಾ ಖುಷಿಯಾದ ದಿನ - ನಾನು ಎಡೆಯೂರು ಮಾರ್ಗವಾಗಿ ತಿಪಟೂರು ತಾಲೂಕಿನಲ್ಲಿರುವ ನಮ್ಮ ಮನೆದೇವರ ದೇವಸ್ಥಾನಕ್ಕೆ ಸ್ವತಂತ್ರವಾಗಿ ಕಾರ್ ಓಡಿಸಿಕೊಂಡು ಹೋಗಿದ್ದು. ಅವತ್ತು ಒಟ್ಟು ೨೮೪ ಕಿ.ಮೀ. ಕ್ರಮಿಸಿದ್ವಿ.
ತುಂಬಾ ಬೇಸರ ತಂದ ಮಾತು - ಕಾರ್ ಓಡಿಸೋದು ಹೇಳಿಕೊಡುತ್ತಿದ್ದಾಗ ಅಪ್ಪ "ಈ ಜನ್ಮದಲ್ಲಿ ನೀನು ಕಾರ್ ಓಡಿಸೋದು ಕಲಿಯೊಲ್ಲ ಬಿಡು" ಅಂದಿದ್ದು
ಸಂತೋಷ ತಂದ ಮಾತು - ಅಪ್ಪ "ನೀನು ನಮ್ಮ ಮನೆಯ ಕಲಶ" ಎಂದು ಹೇಳಿದ್ದು
ಮರೆಯಲಾರದ ದಿನ -ನನ್ನಕ್ಕನ ನಿಶ್ಚಿತಾರ್ಥದ ದಿನ/ ನನ್ನ ಸ್ನೇಹಿತೆಯ ಹುಟ್ಟುಹಬ್ಬದ ಜೊತೆ ನನ್ನ ಹುಟ್ಟುಹಬ್ಬವನ್ನು ಆಚರಿಸಿದ್ದ ದಿನ
ಸಂತಸದ ಒಡನಾಟ - ಸಂಪದದ್ದು
ತುಂಬಾ ಬೇಸರವಾದ ಕ್ಷಣ -external evaluator ನನ್ ಸೆಮಿನಾರ್ ಕೇಳಲು ಆಸಕ್ತಿಯಿಲ್ಲ ಎಂದಾಗ
ತುಂಬಾ ನೋವಾಗಿದ್ದು - ಸಹಪಾಠಿಗಳು ಮೈಸೂರಿಗೆ ಪ್ರವಾಸಕ್ಕೆಂದು ಹೋದಾಗ ಅವರ ಜೊತೆ ನಾನು ಹೋಗಲಾಗದಿದ್ದಾಗ
ಈ ವರ್ಷ ಹೆಚ್ಚು ಬಾರಿ ಕೇಳಿದ compliment - ನಿಮ್ಮ ನಗು ಚೆನ್ನಾಗಿದೆ... ಇದನ್ನಂತೂ ಕೇಳಿ ಕೇಳಿ ನಂಗೆ ಬೇಜಾರಾಗಿ ಹೋಗಿದೆ....
ಈ ವರ್ಷ ಮಾಡಿದ ಪ್ರಮುಖ ಕೆಲಸ - ೪ ವೀಲರ್ D.L. ತಗೊಂಡಿದ್ದು... ಇನ್ನು ೨೦ ವರ್ಷ ಅದರ ಬಗ್ಗೆ ಚಿಂತೆಯಿಲ್ಲ...
ಆರೋಗ್ಯದ ದೃಷ್ಟಿಯಿಂದ ಮಾಡಿದ ನಿರ್ಣಯ- ನಾನು ದೇಹ ತೂಕ ಕಡಿಮೆ ಮಾಡಿಕೊಳ್ಳಬೇಕೆಂಬುದು. ಅದರ ಬಗ್ಗೆ ಆಗಲೇ ಕಾರ್ಯಪ್ರವೃತ್ತಳಾಗಿ ಭಾಗಶಃ ಯಶಸ್ವಿಯಾಗಿದ್ದೇನೆ ;)
ಇನ್ನೊಂದು ವಿಷ್ಯ : ನನ್ನ ಮೊದಲ ಸೀರೆ ಕೊಂಡುಕೊಂಡಿದ್ದು ೨೦೦೯ರಲ್ಲೆ
ನಿಮ್ಮ blog ತುಂಬಾ ಚೆನ್ನಾಗಿದೆ!
ReplyDeletesuper
ReplyDeletenice post :)happy new year :)
ReplyDeleteತುಂಬಾ ಚೆನ್ನಾಗಿದೆ ನಿಮ್ಮ ಯೋಚನೆ....... ಸಣ್ಣದಾಗಿ ನಿಮ್ಮ ಕಳೆದ ವರುಷದ ಡೈರಿ ತಿಳಿಸಿದ್ದೀರಿ.... ನಿಮಗೂ ಹೊಸ ವರುಷದ ಶುಭಾಶಯಗಳು......
ReplyDeleteGood Good...
ReplyDeleteHappy New Year :)
ಪ್ರತಿಕ್ರಯಿಸಿದ ಎಲ್ಲರಿಗೂ ಧನ್ಯವಾದಗಳು... ಹಾಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.. :)
ReplyDeleteನಿಮ್ಮ ಕಳೆದ ವರ್ಷದ ವಿವರಣೆ ಚೆನ್ನಾಗಿದೆ
ReplyDeleteಹೊಸ ವರ್ಷಕ್ಕೆ ಶುಭವಾಗಲಿ
hi indushree m new for blog.n ur blog is bit interesting to read abt u n main thing i love the word manassu so i entered in ur blog.
ReplyDeleteವರ್ಷಕ್ಕೆ ಒಳ್ಳೇ ಅಫಿಡವಿಟ್ಟೇ ಒಪ್ಪಿಸಿದ್ದೀರಿ..
ReplyDeleteಬಿಲ್ಲಿನಿಂದ ಬಾಣ ಹೊರಬರಬೇಕಾದರೆ ಅದನ್ನ ಹಿಂದೆ ಎಳೀಬೇಕು, ಇಲ್ಲವಾದರೆ ಬಾಣ ತನ್ನ ಮೊಮೆಂಟಮ್ ಪಡೆದುಕೊಳ್ಳುವುದಿಲ್ಲ. ನಿಮ್ಮ ತಂದೆಯ ಮಾತು ಅವರ ಅನುಭವ ಕಲಿಸಿದ್ದಿರಬೇಕು, ಜನ್ಮದಲ್ಲಿ ಕಾರ್ ಓಡಿಸಲ್ಲ ಅಂದರೆ ಬೇಸರ ಪಟ್ಟುಕೋಬೇಕಿಲ್ಲ, ಅದರ ಅರ್ಥ "ಬೇಗ ಕಲಿ ಮಾರಾಯ್ತಿ.." ಅಂತ ಇರುತ್ತೆ..:)