Friday, January 29, 2010

ಏನನ್ನಾದರೂ ಬರೆಯಬೇಕೆಂಬ ಆಸೆ

ಏನನ್ನಾದರೂ ಬರೆಯಬೇಕೆಂಬ ಆಸೆ
ಬರೆಯಲಿ ಏನು ತಿಳಿಯದಾಗಿದೆ
ಬಡಿದೆಬ್ಬಿಸಿ ದಾರಿ ತೋರೆನಗೆ ಎಂದರೂ
ಮನಸಿಂದು ಮೌನವಾಗಿದೆ

ಕಂಡ ಕನಸು ನನಸಾಗದಾದಾಗ
ಕನಸುಗಳಿಗೆನ್ನಲ್ಲಿ ಜಾಗವಿಲ್ಲವೆಂದು
ಸುಳ್ಳಾಡಿ ವಾಸ್ತವವ ಒಪ್ಪದ ಹೇಡಿಯಂತೆ
ಕನಸ ಕಂಡ ಮನಸನ್ನೇ ದೂಷಿಸಿದ ಫಲವೇ?

ಒಂದರ ಹಿಂದೊಂದು ಬೆಂಬಿಡದೆ ಮನದ ಕಿನಾರೆಯ
ಸ್ಪರ್ಶಿಸುತ್ತಿದ್ದ ಭಾವನೆಗಳಿಗೆನ್ನಲ್ಲಿ ಸಮಯವಿಲ್ಲವೆಂದು
ಅವುಗಳನ್ನು ನನ್ನೊಳಗೆ ಅಡಗಿಸಿಡುವ ಸಾಹಸದಿ
ನನ್ನ ಮನಕ್ಕೆ ಬೀಗ ಜಡಿದೆನೆ?

ಬೀಗ ಜಡಿದಿದ್ದರೂ ಬೀಗವನೊಡೆದು
ಹೊರಬಂದ ಭಾವನೆಗಳ ಉತ್ಕೃಷ್ಟತೆಯ
ಪದಗಳಲಿ ವಿವರಿಸಲು ಅಶಕ್ತಳಾದಾಗ
ಸೋಲಿನ ಭೀತಿಯಿಂದ ಸುಮ್ಮನಾದೆನೆ?

ನೂರಾರು ಭಾವಗಳೀಗ ಒಮ್ಮೆಲೆ ಪ್ರವಹಿಸಿ
ಕಾಣದೂರಿಗೆನ್ನ ಕೊಂಡೊಯ್ಯುತ್ತಿವೆ
ಬೆರಳುಗಳ ಮಧ್ಯೆ ಬಂಧಿಯಾಗಿರುವ ಲೇಖನಿಯ
ಬುದ್ಧಿಯ ಹಿಡಿತದಲ್ಲಿರುವ ಪದಗಳು ಆಳುತ್ತಿವೆ

ಪದಗಳು ನೆನಪಾಗಲೊಲ್ಲವು ಇಂದು
ಬರೆಯಬೇಕೆಂಬ ಆಸೆಯು ಸೋಲನ್ನೊಪ್ಪದು
ಬಂಧಿಯಾದ ಲೇಖನಿಯೇ ಭಾವವನ್ನು ಬಿಡುಗಡೆಗೊಳಿಸೀತೆ?
ಮನಸಿನ ಮೌನದ ಮಾತಿಗೆ ಅಕ್ಷರ ರೂಪ ಕೊಟ್ಟೀತೇ?

11 comments:

  1. ಇಂದುಶ್ರೀ ಮೇಡಂ,
    ತುಂಬಾ ಚೆನ್ನಾಗಿದೆ..... ಏನೂ ಬರೆಯಲು ತೋಚದೆ, ಏನೇನೂ ಬರೆದಕ್ಕಿಂತ ಇದು ವಿಭಿನ್ನವಾಗಿದೆ.... ಭಾವನೆಗಳಿಗೂ ತಿಳಿಯದೆ ಬರೆದ ಕವನ ಸೂಪರ್..... ಕೊನೆಗೂ ಚೆನ್ನಾಗಿರುವುದನ್ನೇ ಬರೆದಿದ್ದೀರಿ... ಧನ್ಯವಾದಗಳು ಒಳ್ಳೆಯಕೊಟ್ಟಿದ್ದಕ್ಕೆ....

    ReplyDelete
  2. ಏನು ಬರೆಯುವುದು ಅಂತಾನೆ ಇಷ್ಟು ಒಳ್ಳೆ ಕವನ ಬರೆದಿದ್ದಿರಲ್ಲ ಇಂದುಶ್ರಿ..ಗುಡ್ ಚೆನ್ನಾಗಿ ಇದೆ.. ಕೀಪ್ ಇಟ್ ಅಪ್
    Guru

    ReplyDelete
  3. ಮನಸಿನ ಮೌನದ ಮಾತಿಗೆ ಅಕ್ಷರ ರೂಪ ಕೊಟ್ಟೀತೇ?

    ಕೊಟ್ಟಿದೆ ಪುಟ್ಟ :)

    ReplyDelete
  4. ತುಂಬಾ ಚಂದ ದ ಕವನ
    ಅದರಲ್ಲೂ
    ಬೀಗ ಜಡಿದಿದ್ದರೂ ಬೀಗವನೊಡೆದು
    ಹೊರಬಂದ ಭಾವನೆಗಳ ಉತ್ಕೃಷ್ಟತೆಯ
    ಪದಗಳಲಿ ವಿವರಿಸಲು ಅಶಕ್ತಳಾದಾಗ
    ಸೋಲಿನ ಭೀತಿಯಿಂದ ಸುಮ್ಮನಾದೆನೆ?
    ಇಷ್ಟವಾಯಿತು

    ReplyDelete
  5. tumba chennagide indushri :) bhavanegallanu chennagi bannisiddira :) :)

    ReplyDelete
  6. ಸು೦ದರ ಕವನ..
    ಇಷ್ಟವಾಯ್ತು..ಬರೆಯುತ್ತಿರಿ.

    ReplyDelete
  7. ದಿನಕರ ಮೊಗೇರ ,ಗುರುಪ್ರಸಾದ್, ವಿನಯಣ್ಣ,ಗುರುಮೂರ್ತಿ,snow white ಮತ್ತು ಮನಮುಕ್ತಾ ಅವರಿಗೆ ಧನ್ಯವಾದಗಳು... :)

    ReplyDelete
  8. ಇಂದುಶ್ರೀ, ನಿಜವಾಗಿಯೂ ಏನೂ ಬರೆಯಲು ಆಗದಾದಾಗ ಬಹು ಉನ್ನತ ವಿಚಾರ ಹೊಳೆಯುತ್ತೆ, ಪದಗಳು ಕೂಡುತ್ತವೆ, ಸಾಲು ಅರಳುತ್ತವೆ ಮತ್ತು ಕವನ ತಂತಾನೆ ಮೈಡಳೆದು ನಿಲ್ಲುತ್ತೆ ಎನ್ನುವುದಕ್ಕೆ ನಿಮ್ಮ ಕವನವೇ ಸಾಕ್ಷಿ....ಯಾಕೆ..? ಈ ಸಾಲುಗಲೇ ಹೇಳುತ್ತವಲ್ಲಾ...?
    ಸುಳ್ಳಾಡಿ ವಾಸ್ತವವ ಒಪ್ಪದ ಹೇಡಿಯಂತೆ
    ಕನಸ ಕಂಡ ಮನಸನ್ನೇ ದೂಷಿಸಿದ ಫಲವೇ?

    ReplyDelete
  9. ellarallu bareyabekemba aase iruvodu sahaja!! aadre aa aase illi purnavagide!! baribeku antha ankolodu sulabha, bareyodu kashta!! aa kashtavanu saral padagalalli vivarsidare!! danyavadagalu INDUSHREE madam

    ReplyDelete
  10. Indushree Madam, Very much liked the way your lines mirror the moods of your mind. Hats off to you.
    By the way, about the 4-wheeler purchase that you mentioned elsewhere... madam, without questioning its long life that you mentioned (20 years), I doubt very much whether you will have the mind to keep it till then... People & the mood of their mind is NOT that long-lasting!

    ReplyDelete
  11. @ Ramakant Thanks for your appreciation...
    I mentioned about 4 wheeler Driving License which is valid for 20 years n not about purchasing a 4 wheeler... :)

    ReplyDelete