Friday, November 19, 2010

ವಿದಾಯ

ಮರೆತ ಸ್ವರಗಳ ಮೊರೆತ
ಎದೆಯ ಸಾಗರದೊಳಗೆ
ಭಾವನೆಗಳ ಭೋರ್ಗರೆತ
ಮನದ ಕಡಲೊಳಗೆ

ಇನ್ನು ಬೇಸರಿಸಿ ಫಲವಿಲ್ಲ
ಕವಲುದಾರಿಯಲ್ಲಿ ನಿಂತಾಯ್ತು
ನೆನಪುಗಳಿಗಾಗಿ ಒದ್ದಾಡಿ ಸುಖವಿಲ್ಲ
ಪಯಣ ಮುಂದುವರೆಯಬೇಕು

ಎಲ್ಲರೆದುರು ಮಾತನಾಡಿದರೆಲ್ಲಿ
ಬಿಕ್ಕುವೆನೋ ಎಂಬ ಹಿಂಜರಿಕೆ
ನಾ ಹೇಳಬೇಕಾದ್ದೆಲ್ಲವ
ನನ್ನ ಮೌನವೇ ತಿಳಿಸಿತಲ್ಲವೇ?

ದೂರಾಗುವ ಕಾಲ ಬಂದಾಯ್ತು
ಸಮಯ ಕಾದೀತೇ ನಮಗಾಗಿ?
ಕಣ್ಣೆದುರಿಲ್ಲದಿದ್ದರೂ ಮನದಲ್ಲಿರಿ
ಕಾಡುವ ಸಿಹಿ ಸವಿ ನೆನಪಾಗಿ

ಕೊನೆಯ ಮಾತು:‌ ಇದುವರೆಗೆ PESIT ಯಲ್ಲಿ ನನ್ನ ಜೊತೆಗಿದ್ದು ಮಧುರಾತಿಮಧುರ ನೆನಪುಗಳ ರಾಶಿಯನ್ನು ಒಟ್ಟುಗೂಡಿಸಿ ನೆನಪಿನ ಪುಟಗಳ ತುಂಬಾ ತುಂಬಿರುವ ನನ್ನೆಲ್ಲಾ ಸ್ನೇಹಿತರಿಗೆ....

8 comments:

  1. ತುಂಬ ಚೆನ್ನಾಗಿದೆ ಮತ್ತು ಸ್ನೇಹಿತರನ್ನ ಬಿಟ್ಟು ಹೋಗುವಾಗ ಬೇಜಾರ್ ಆಗುತ್ತೆ

    ReplyDelete
  2. nimma snehitara jothe kaleda kshanagaLu sadha hasiraagirali...

    ReplyDelete
  3. savinenapugalannitta janarige vidaayada kavana chennaagide.

    ReplyDelete
  4. ಎಲ್ಲರಿಗೂ‌ ಧನ್ಯವಾದಗಳು.... :)

    ReplyDelete
  5. ನಿಮ್ಮ ಕವನ ನೋಡಿ ನನಗೆ ಮುಖೇಶ್ ರ ಹಳೆಯ ಹಾಡು ನೆನಪಾಯ್ತು...
    ಹಮ್ ಛೋಡ್ ಚಲೇ ಹೈಂ ಮಹಫಿಲ್ ಕೊ ಯಾದ್ ಆಯೆ ಕಭಿ ತೊ ಮತ್ ರೋನಾ....
    ಅಗಲಿಕೆಯ ಭಾವ ಅರ್ಥವತ್ತಾಗಿ ಮೂಡಿಸಿದ್ದೀರಿ ಕವನಿಸಿ...

    ReplyDelete
  6. ಈ 'ವಿದಾಯ' ಮತ್ತಷ್ಟು ಸ್ನೇಹಿತರನ್ನ ಹತ್ತಿರಗೊಳಿಸಲಿ - ಹಾರೈಕೆ.

    ReplyDelete
  7. ಕೊನೆಯ ಮೆಟ್ಟಿಲೈನಲ್ಲಿ ನಿಂತಿರುವೆವು ಕೊನೆಯ ಭೇಟಿಯೂ ಏನು ??? ಬರಲಾರದ ದಾರಿ ನಾನಂತೂ ಹಿಡಿದಿಲ್ಲ ... ದುಂಡಾವರ್ತಿ ಭುವಿ... ನೆನಪು ಮುತ್ತುತ ಮರಳಿ.. ಬಾಲ್ಯ ನಗಲಿ ಎಂಬ ಮಿತ್ರನ ವಿದಾಯದ ಹಲವು ಬಿಡಿ ಸಾಲುಗಳು ನೆನಪಾದವು.

    ReplyDelete