Tuesday, August 18, 2009

ನಾನು ಕಾರ್ ಡ್ರೈವ್ ಮಾಡುತ್ತಿದ್ದಾಗ...

ಹೋದ ಸಾರಿ ಊರಿಗೆ ಸ್ವಾತಂತ್ರ್ಯದಿನದಂದು ಹೋಗಿದ್ದಾಗ ನಾನು ನಮ್ ತಾತಂಗೆ ಹೇಳಿದ್ದೆ "ಇನ್ನೊಂದು ವರ್ಷದಲ್ಲಿ ನಾನೇಕಾರ್ ಡ್ರೈವ್ ಮಾಡಿಕೊಂಡು ಬರ್ತೀನಿ" ಅಂತ.ಆಗ ನಮ್ ತಾತ ಅಜ್ಜಿ ಇಬ್ರೂ "ನೀನು ಓಡಿಸ್ತೀಯಾ?" ಅಂತ ನಕ್ಕಿದ್ರು. ಅಮ್ಮನೋಡ್ತಾ ಇರಿ ಮುಂದಿನ ವರ್ಷ ಅವಳೇ ಓಡಿಸಿಕೊಂಡು ಬರ್ತಾಳೆ " ಅಂದ್ರು. ಅಂತೂ ಇಂತೂ ಕಾರ್ ಡ್ರೈವಿಂಗ್ ಕಲಿತು ಕಳೆದಭಾನುವಾರ(೧೬ರಂದು) ಒಂದು ಮದುವೆಗೆ ಹೋಗಬೇಕಿದ್ದರಿಂದ ನಾನೇ ಬೆಂಗಳೂರಿನಿಂದ ಕಾರ್ ಓಡಿಸಿಕೊಂಡು ಹೋಗಿದ್ದೆ.

ಹೋಗ್ತಾ ದಾರಿಯಲ್ಲಿ.....

. ತುಮಕೂರು - ಗುಬ್ಬಿ ಮಧ್ಯದ ದಾರಿಯಲ್ಲಿ ಮಲ್ಲಸಂದ್ರ ಅನ್ನೋ ಒಂದು ಊರು ಸಿಗುತ್ತೆ. ಅಪ್ಪ ಅಲ್ಲಿ ಹೂವು ತರ್ತೀನಿ ಗಾಡಿನಿಲ್ಲಿಸು ಅಂದ್ರು. ನಿಲ್ಲಿಸಿ ಅಪ್ಪ ಬರೋದನ್ನೆ ಕಾಯ್ತಾ ಇದ್ದೆ. ಆಗ ಒಬ್ಳು ಹುಡುಗಿ ಸುಮಾರು ೧೦ ವರ್ಷ ಇರ್ಬೇಕು ನೀರು ತಗೊಂಡುಹೋಗ್ತಿದ್ಳು. ಕಾರ್ ಒಳ್ಗೆ ಇಣುಕಿ ನಾನು ಕೂತಿದ್ದನ್ನ ನೋಡಿ ಅವರಮ್ಮನಿಗೆ "ನೋಡಿಲ್ಲಿ ಈಯಮ್ಮ ಕಾರ್ ಬಿಡ್ತಾ ಇರೋದಾ" ಅಂದ್ಳು.ಅವರಮ್ಮನೂ ಸೋಜಿಗದಿಂದ ಒಮ್ಮೆ ಕಾರ್ ಒಳಗೆ ಇಣುಕಿ ಮುಂದೆ ಹೋದಳು.

. ತುಮಕೂರು ಡೈರಿಯ ಬಳಿ ಅಪ್ಪ ಪೇಡ ತಗೊಳ್ಳೋಣ ಅಂದ್ರು. ಬಲಕ್ಕೆ ತಿರುಗಲು ಇಂಡಿಕೇಟರ್ ಹಾಕಿ ಹಿಂದೆ ಬರುತ್ತಿದ್ದಗಾಡಿಗಳ ಕಡೆ ನೋಡಿ ಯಾವುದೇ ಗಾಡಿಯಿರಲಿಲ್ಲವಾದ್ದರಿಂದ ಬಲಕ್ಕೆ ಬಂದೆ. ಅಲ್ಲಿ ನಿಂತಿದ್ದ ಒಬ್ಬ ಹುಡುಗ " ' L' ಬೋರ್ಡು " ಅಂದ. ನನ್ ಕಾರು ನನ್ನಿಷ್ಟ 'L' ಬೋರ್ಡಾದ್ರೂ ಹಾಕ್ತೀನಿ ಏನಾದ್ರು ಹಾಕ್ತೀನಿ ನಾನು ಸರಿಯಾಗಿ ಓಡಿಸ್ತಾ ಇರ್ಬೇಕಾದ್ರೆ ಕಾಮೆಂಟ್ ಯಾಕೆ ಅಂತ ಕೇಳ್ಬೇಕು ಅನ್ನಿಸಿದ್ರೂ ಸುಮ್ನೆ ಜಗಳ ಯಾಕೆ ಅಂತ ಏನೂ ಮಾತಾಡಲಿಲ್ಲ.

. ಮದುವೆಮನೆಗೆ ಹೋಗಿ ಮದುವೆ ಮುಗಿಸಿಕೊಂಡು ಬರುವಾಗ ಅಪ್ಪ ಕಾರ್ ಕೀ ಕೊಟ್ಟು ಗೇಟ್ ಹತ್ರ ಕಾರ್ ತಗೊಂಡು ಬಾಅಂದ್ರು. ನಾನು ತಂದು ಗೇಟ್ ಮುಂದೆ ನಿಲ್ಲಿಸಿದಾಗ ಅಪ್ಪ ಅಮ್ಮ ದೊಡ್ಡಪ್ಪ ದೊಡ್ಡಮ್ಮನ ಜೊತೆ ಮಾತಾಡ್ತಾ ಇದ್ರು. ನಾನುಬಂದಿದ್ದನ್ನು ನೋಡಿ ದೊಡ್ಡಪ್ಪ ವ್ಯಂಗ್ಯವಾಗಿ "ಯಾಕೆ ಇವತ್ತು ಬೇರೆ ಯಾರೂ ಡ್ರೈವರ್ ಸಿಗ್ಲಿಲ್ವಾ" ಅಂದ್ರು. ನಂಗೆ ಕೋಪ ಬಂತು. "ಯಾಕೆ ನಾನು ಡ್ರೈವ್ ಮಾಡ್ಬಾರ್ದಾ?" ಅಂದೆ. ಅಪ್ಪ ಇವತ್ತು ಬೆಂಗಳೂರಿಂದ ಅವಳೆ ಓಡಿಸಿಕೊಂಡು ಬಂದಿರೋದು ಅಂದ್ರು. ದೊಡ್ಡಪ್ಪ ಮತ್ತೊಮ್ಮೆ ವ್ಯಂಗ್ಯವಾಗಿ ನಕ್ಕು ಸುಮ್ಮನಾದ್ರು.

. ಮುಂದೆ ಊರಿಗೆ ಹೋಗಿ ಮನೆ ಮುಂದೆ ನಿಲ್ಲಿಸಿದಾಗ ಎಲ್ರೂ ಏನೋ ಜೋರಾಗಿ ನಗ್ತಿದ್ರು. ತಾತ ಏನೂ ಮಾತಾಡ್ಲಿಲ್ಲ. ಇನ್ನೂ೧೩ ವರ್ಷದ ನನ್ ತಮ್ಮಂಗೆ ನೀನು ಯಾವಾಗ್ ಕಲಿಯೋದು ಅಂದ್ರು ಅಷ್ಟೆ. ಅಜ್ಜಿ ನೀನೆ ಓಡಿಸ್ಕೊಂಡು ಬಂದುಬಿಟ್ಟಿದ್ದೀಯಾಅಂದ್ರು. ಅಜ್ಜಿಗೆ ಖುಷಿಯಾಗಿತ್ತು ನಾ ಕಲಿತದ್ದು. ತಾತಂಗೆ ಯಾಕೋ ಬೇಜಾರಾದಂಗಿತ್ತು.

. ಊಟ ಮುಗಿಸಿ ಮತ್ತೆ ವಾಪಸ್ ಹೊರಟ್ವಿ. ಅಲ್ಲಿ ದಾರಿಯಲ್ಲಿ ಒಂದು ಹುಡುಗಿ ಆಟ ಆಡ್ತಾ ಇದ್ದಳು. ಹಾರ್ನ್ ಮಾಡಿದೆ. ಗಾಡಿನೋಡಿ ಕಿರುಚಿದ್ಳು. "ಅಮ್ಮ ಬೇಗ ಓಡ್ ಬಾ. ಒಂದು ಹೆಂಗ್ಸು ಕಾರ್ ಓಡಿಸ್ತಾ ಇದ್ದಾಳೆ" ಅಂತ. ನಕ್ಕು ಮುಂದೆ ಬಂದೆ.

. ಇನ್ನು ಮುಂದೆ ಬಂದ್ರೆ ಒಂದು ನಾಲ್ಕೈದ್ ಜನ ಹುಡುಗ್ರು ನಿಂತಿದ್ರು. " ಟ್ರೈನಿಂಗ್ ಕೊಡ್ತಾ ಅವ್ರೆ" ಅಂತ ಇನ್ನೊಂದು ಕಾಮೆಂಟ್.

. ಮತ್ತೆ ಇನ್ನೇನು ಗುಬ್ಬಿ ಸಮೀಪ ಬಂದಾಗ ಯಾರೋ ಒಬ್ರು ಸೈಕಲ್ ತುಳಿಯುತ್ತಾ ಹಿಂದೆ ನೋಡ್ಕೊಂಡು ಬರ್ತಿದ್ರು. ಜೋರಾಗಿಹಾರ್ನ್ ಮಾಡಿದೆ. ತಕ್ಷಣ ಗಾಡಿ ಕಡೆ ನೋಡಿ ಒಂದು ಕ್ಷಣ ಹಾಗೇ ನಿಂತಿದ್ದು ಆಮೇಲೆ ಸೈಕಲ್ ಪಕ್ಕಕ್ಕೆ ನಿಲ್ಲಿಸಿ ಕಾರನ್ನೇ ನೋಡ್ತಾಇದ್ರು ಅಂತ ಹಿಂದೆ ಕುಳಿತಿದ್ದ ನನ್ ತಮ್ಮ ಹೇಳ್ದ. ಅಲ್ಲ ಒಬ್ಳು ಹುಡುಗಿ ಕಾರ್ ಡ್ರೈವ್ ಮಾಡಿದ್ರೆ ಇವ್ರಿಗೆಲ್ಲಾ ಏನಾಗುತ್ತೆ ಅಂತ. ಅಲ್ಲೆಲ್ಲಾ ಕಾರ್ ಡ್ರೈವಿಂಗ್ ಗೊತ್ತಿರೋ ಹುಡುಗಿಯರು ಕಮ್ಮಿ ಇರ್ಬಹುದು ಆದ್ರೆ ಅದೇ ಒಂದು ಸೋಜಿಗ ಅನ್ನುವಂತೆ ನೋಡೋದಾ?

ಇದೆಲ್ಲಾ ನನ್ ಕಿವಿಗೆ ಬಿದ್ದಿದ್ದಂತೂ ನಿಜ. ಆದ್ರೆ ಮೊದಲನೇ ಸಲ ಊರಿಗೆ ಕಾರ್ ಡ್ರೈವ್ ಮಾಡಿಕೊಂಡು ಹೋಗ್ತಾ ಇದ್ದೀನಿ ಅಂತನಾನು ತುಂಬಾ excite ಆಗಿ ಕಾಮೆಂಟ್ ಗಳ ಬಗ್ಗೆ ತಲೆ ಕೆಡಿಸಿಕೊಂಡಿದ್ದೀನಾ??

ಗೊತ್ತಿಲ್ಲ "

6 comments:

 1. Its passive acceptance, women themselves were commenting and surprised by a women driving..
  Well congrats on a good job

  ReplyDelete
 2. ಯಾರು ಎನಾದರೂ ಅಂದುಕೊಳ್ಳಲಿ ...
  ಕಾರು ಒಡಿಸೋದು ಕಲಿತರಲ್ಲ ಬಿಡಿ...
  congrats...
  Drive safely...

  ReplyDelete
 3. ಚನ್ನಾಗಿದೆ ನಿಮ್ಮ ಎಕ್ಸ್ ಪೀರಿಯನ್ಸು...

  ಬೆಂಗಳೂರಿನ ಸಮೀಪ ಕಾರ್ ಓಡಿಸಿದ್ದಕ್ಕೆ ಹೀಗೆ...
  ನಮ್ಮ ಉತ್ತರ ಕರ್ನಾಟಕದ ಕಡೆ ಒಮ್ಮೆ ಕಾರ್ ಓಡಿಸಿಕೊಂಡು ಬಂದು ಬಿಡಿ..
  ಇನ್ನಷ್ಟು ಕಮೆಂಟ್ ಗಳು ಉಚಿತವಾಗಿ ಸಿಗುತ್ತವೆ...

  ಹ್ಹಹ್ಹ..ಹ್ಹ್ಹ್ಹಹ್ಹ...ಹ್ಹಹ್ಹ..

  Very Funny!!

  ಇಂತಿ ನಿಮ್ಮ ಪ್ರೀತಿಯ,
  ಶಿವಶಂಕರ ವಿಷ್ಣು ಯಳವತ್ತಿ
  ಹೌದು ಸರ್..ಟ್ವಿಟರ್ ಈಗ ಮನರಂಜನೆಯ ಜೊತೆಗೆ ಅತಿ ವೇಗದ ಸುದ್ದಿ ವಾಹಿನಿಯಾಗಿ ತಯಾರಾಗುತ್ತಿದೆ..

  ಇಂತಿ ನಿಮ್ಮ ಪ್ರೀತಿಯ,
  ಶಿವಶಂಕರ ವಿಷ್ಣು ಯಳವತ್ತಿ
  http://shivagadag.blogspot.com

  ಟ್ವಿಟರ್

  http://twitter.com/shivagadag

  ReplyDelete