Wednesday, July 2, 2008

ಈ ಮನಸು

ಆ ಲೋಕದಲ್ಲಿ ತೇಲಾಡೋ ಆ ಆನಂದ ಆಹ್ಲಾದ ಅನುಭವಿಸಿದವ್ರಿಗೆ ಗೊತ್ತು. ಆ ಕಲ್ಪನಾಲೋಕಕ್ಕೆ ಒಂದು ಸಣ್ಣ ಕಿಟಕಿ ಈ ಮನಸಿನ ಮಾತು. ಇದು ಬರಿ ನನ್ ಮನಸಿಗೆ ಮಾತ್ರ ಕಿಟಕಿ ಅಲ್ಲ ನನ್ ಥರದ ಎಷ್ಟೋ ಹುಡುಗಿಯರ ಮನಸಿಗೆ ಕಿಟಕಿ ಅಂತ ಹೇಳಬಹುದು ಯಾಕೆ ಅಂತೀರಾ? ಈ ವಯಸ್ಸಿನ ಹುಡುಗೀರೆ ಹೀಗೆ……… ಹುಚ್ಚು ಖೋಡಿ ಮನಸು ಅಂತಾರಲ್ಲ ಹಾಗೆ ಒಂಥರಾ ಮರ್ಕಟ ಮನಸು…

ಹೌದಲ್ವೇನ್ರಿ …ಈ ಸುಂದರ ಜಗತ್ತಲ್ಲಿ ಅತ್ಯದ್ಭುತ ಅಂತ ಹೇಳೋಕಾಗೋದು ಮನಸ್ಸಿಗೆ ಮಾತ್ರ…. ನಂ ಮನಸಲ್ಲಿ ಸಂಕಲ್ಪ ಮಾಡಿದ್ವಿ ಅಂದ್ರೆ ಎಂಥ ಕೆಲ್ಸ ಬೇಕಾದ್ರೂ ಸಾಧಿಸಬಹುದು……. ಮನಸ್ಸಿಗೆ ಯಾವುದೇ ಅಡೆತಡೆಗಳಿಲ್ಲ….ಯಾವಾಗ ಅಂದ್ರೆ ಆವಾಗ ಎಲ್ಲಂದ್ರೆ ಅಲ್ಲಿಗೆ ಹೋಗೋ ಶಕ್ತಿ ಇರೋದು ಮನಸ್ಸಿಗೆ ಮಾತ್ರ ಯಾವ್ದೇ ವೀಸಾ ಪಾಸ್ ಪೋರ್ಟ್ ಇಲ್ದೆ ಎಲ್ಲಾ ದೇಶಕ್ಕೂ ಹೋಗಿ ಅಷ್ಟೇ ಬೇಗ ವಾಪಸ್ ಬರೋಕೆ ಇನ್ನ್ಯಾರಿಗೆ ಆಗುತ್ತೆ ನೀವೇ ಹೇಳ್ರಿ…

ಈ ಮನಸ್ಸು ಒಂದೊಂದು ಸಲ ಎನೇನೇನೇನೆಲ್ಲಾ ಮಾಡ್ಸುತ್ತೆ ಗೊತ್ತೇನ್ರಿ?? ಸ್ವಲ್ಪ ಸ್ವಾತಂತ್ರ್ಯ ಸಿಕ್ಕಿದ್ರು ಸಾಕು ಎಲ್ಲೆಲ್ಲಿಗೋ ಹೋಗ್ಬಿಡುತ್ತೆ……ಸುಮ್ನೆ ತನ್ ಪಾಡಿಗೆ ತಾನಿರೋ ನನ್ನಂಥ ಮುಗ್ಧ ಹುಡುಗೀರಿಗೆ ಏನೇನೋ ಮೋಡಿ ಮಾಡಿ ತನ್ ಕೆಲ್ಸ ಸಾಧಿಸಿಕೊಂಡು ಬಿಡುತ್ತೆ. ಏನೂ ಬರೆಯೋಕೇ ಬರದ ನನ್ನಂಥವಳಿಗೂ ಬರೆಯೋ ಆಸೆ ತಂದು ಈ ಮೂಲಕ ಅದನ್ನ ನೆರವೇರಿಸಿಕೊಂಡು ಬಿಡುತ್ತೆ ಅಂದ್ರೆ ಅದು ಹಾಕೋ ಮೋಡಿ ಎಂಥದ್ದು ಅಂತ ಗೊತ್ತಾಗುತ್ತೆ ಅಲ್ವೇನ್ರಿ……..

ಯಾಕೋ ಏನೋ ಕೆಲವೊಂದ್ಸಲ ಬುದ್ಧಿಗೂ ಮನಸ್ಸಿಗೂ ಜಗಳ ಬಂದಾಗ ಮಾತ್ರ ನನ್ನಂಥವರಿಗೆ ನಿಜವಾಗ್ಲು ಕಷ್ಟ ಆಗುತ್ತೆ ಕಣ್ರೀ….ಯಾಕೆ ಗೊತ್ತ? ಬುದ್ಧಿ ಹೇಳಿದ್ದನ್ನ ಮನಸ್ಸು ಒಪ್ಪಲ್ಲ ಮನಸು ಹೇಳೋದಕ್ಕೆ ಬುದ್ಧಿ ಕ್ಯಾರೆ ಅನ್ನಲ್ಲ. ಇಂಥ ಸಮಯದಲ್ಲಿ ನನ್ನಂಥವರ ಪೀಕಲಾಟ ಯಾರ್ ಶತ್ರುಗೂ ಬೇಡ….ಕೆಲವೊಂದ್ಸಲ ಮಾತ್ರ ಬುದ್ಧಿ ಹೇಳ್ತಾ ಇರೋದೇ ಸರಿ ಅಂತ ಗೊತ್ತಿದ್ರೂ ಆ ಮಾತನ್ನ ಧಿಕ್ಕರಿಸಿ ಮನಸು ಮುಂದುವರಿದು ಎಂತೆಂಥ ಅನರ್ಥಗಳಿಗೆ ದಾರಿ ಮಾಡಿಕೊಡುತ್ತೆ ಗೊತ್ತೇನ್ರಿ???? ಆಮೇಲೆ ಇದ್ದೆ ಇರುತ್ತೆ ಮಾಡಿದ ತಪ್ಪಿಗೆ ಪಶ್ಚಾತ್ತಾಪ ಪಟ್ಕೊಂಡು ಪ್ರಾಯಶ್ಚಿತ್ತಕ್ಕಾಗಿ ಅಲೆದಾಡೋದು…..ತಮಾಷಿ ಅಂದ್ರೆ ಹೀಗೆ ಒದ್ದಾಡೋದು ಬುದ್ಧಿಯಲ್ಲ ಆಗ ಕೆಲ್ಸ ಸಾಧಿಸಿದ ಖುಷೀಲಿ ಕುಣಿದಾಡಿರುತ್ತಲ್ಲ ಅದೇ ಕಳ್ಳ ಮನಸ್ಸು…….

ಅದಕ್ಕೆ ನಾನ್ ಹೇಳೋದ್ ಏನಪ್ಪಾ ಅಂದ್ರೆ… ಈ ಮನಸಿದೆಯಲ್ಲ ಅದು ಲಾಯರ್ ಇದ್ದ ಹಾಗೆ ಒಳ್ಳೆಯದರ ಪರವಾಗಿ ಮಾತಾಡಬಹುದು ಅಥವಾ ಕೆಟ್ಟದ್ದರ ಪರವಾಗಿ ಮಾತಾಡಬಹುದು ಆದ್ರೆ ಈ ಬುದ್ಧಿ ಜಡ್ಜ್ ಇದ್ದ ಹಾಗೆ ಮನಸ್ಸಿನ ಮಾತನ್ನ ಅಳೆದು ತೂಗಿ ನಿರ್ಧಾರ ತಗೋಬೇಕು. ಆದ್ರೂ ಒಂದೊಂದ್ ಸಲ ಈ ಲಾಯರ್ನ ಕಿತಾಪತಿಯಿಂದ ಖೈದಿಗಳು ಹೊರಗೆ ಬಂದುಬಿಡ್ತಾರೆ. ಅವ್ರನ್ನ ಇತಿಮಿತಿಯಲ್ಲಿ ಇಟ್ಕೊಳ್ಳೋದು ಮಾತ್ರ ನಮಗೆ ಬಿಟ್ಟಿದ್ದು…

ನೀವೇನೇ ಹೇಳಿ ಎಲ್ಲಾರೂ ಮನಸ್ಸನ್ನ ನನ್ ಥರ ಸುಂದರವಾಗಿ ಇಟ್ಕೊಂಡಿರಲ್ಲ ನೋಡಿ…… ಏನೇನೆಲ್ಲ ಇರುತ್ತಪ್ಪ ಅವ್ರ ಮನಸ್ಸಲ್ಲಿ ! ಆ ಥರದ ವಿಕೃತ ಮನಸ್ಸಿನ ಬಗ್ಗೆ ಅಲ್ಲ ನಾನ್ ಬರೀತಾ ಇರೋದು… ನಾನು ಹೇಳ್ತಾ ಇರೋದು ಮನಸ್ಸನ್ನ ಶುಭ್ರವಾಗಿ ತಿಳಿಯಾದ ಸರೋವರದ ಥರಾ ಇಟ್ಕೊಂಡಿರ್ತಾರಲ್ಲ ಕೆಲವೊಬ್ರು…. ನನ್ ಥರದವ್ರು ….ಕ್ಷಮಿಸಿ ಕ್ಷಮಿಸಿ.... ನಿಮ್ ಥರದವ್ರು ಅಂಥವ್ರ ಬಗ್ಗೆ. ಅಂಥ ಮನಸ್ಸು ಎಲ್ಲರನ್ನೂ ಪ್ರೀತಿಸುತ್ತೆ ಎಲ್ಲರಿಂದಲೂ ಪ್ರೀತಿಸಲ್ಪಡುವುದಕ್ಕೆ ಅರ್ಹನಾಗಿರುತ್ತೆ ಅಲ್ವ….ಅದಕ್ಕೆ ನಿಮ್ ಪ್ರೀತಿ ಯಾವಾಗಲೂ ನನ್ ಮೇಲೆ ಇರಲಿ ಅಂತ ಕೇಳ್ತಾ ಜೊತೆಗೆ ನನ್ ಮನಸು ಕೂಡ ನಿಮ್ಮನ್ನ ಸದಾ ಪ್ರೀತಿಸುತ್ತಾ ಇರುತ್ತೆ ಅಂತ ಹೇಳ್ತಾ ಇದ್ದೀನಿ.

ಸದ್ಯಕ್ಕೆ ಮನಸಿನ ಬಗೆಗಿನ ಮಾತು ಸಾಕು ಅಲ್ವ….ಈ ಮನಸ್ಸು ನನಗೆ ಎನೇನೇನೇನೇನೇನೆಲ್ಲ ಹೇಳುತ್ತೆ ಅನ್ನೋದು ಮುಂದಿನ ಪೋಸ್ಟ್ನಲ್ಲಿ….ಸರೀನಾ……….ಆದ್ರೆ ಈ ಪೋಸ್ಟ್ ಬಗ್ಗೆ ನಿಮ್ಮ ಅನಿಸಿಕೆ ಏನು ಅಂತ ಹೇಳ್ತೀರಿ ತಾನೆ??????

6 comments:

 1. Very nice indu...although i struggled a lot 2 read n understand it...but u've expressed ur feelings truly!!

  ReplyDelete
 2. lo indu this very good keep on writtin........... one more thing send me some more to my mail id ................ok

  ReplyDelete
 3. ಅಬ್ಬಾ!! ಮೊದಲ್ನೇ ಪೊಸ್ಟ್ ನಲ್ಲೆ ಇಷ್ಟೊ೦ದು ಹೇಳಿದೀರ್ರೀ!
  ಹುಚ್ಚು ಕೋಡಿ ಮನಸು ನಿಮ್ಮದು ಅ೦ತ ಮೊದಲೇ ಹೇಳಿ, ಕೊನೆಗೆ ಶುಭ್ರ ತಿಳಿಯಾದ ಸರೋವರ ನಾ??
  ಶುರುಮಾಡಿ ಮುಗಿಸೊಷ್ಟರಲ್ಲೇ ವಯಸ್ಸಾಗಿಹೋಯ್ತಾ? ಹೇಗೆ? :)

  ReplyDelete
 4. ಹುಚ್ಚುಖೋಡಿ ಮನಸು ಯಾಕಂದ್ರೆ ಎಲ್ಲೆಲ್ಲೋ ಓಡುತ್ತೆ...
  ತಿಳಿಯಾದ ಸರೋವರ ಯಾಕಂದ್ರೆ ಅದರೊಳಗೆ ಕೆಟ್ಟದ್ದೇನೂ ಇಲ್ಲ

  ReplyDelete