Saturday, July 5, 2008

ವಿಚಿತ್ರ ಮನಸು (೨)

ಇವತ್ತು ನಿನ್ನೆಯ ಪೋಸ್ಟ್ ನ ಮುಂದುವರಿದ ಭಾಗ………

ನಂ ಮನಸು ಯಾವಾಗಲು ಮಾಡಬೇಡ ಅಂತ ಹೇಳಿದ್ದನ್ನೇ ಮಾಡು ಅಂತ ಪ್ರಚೋದಿಸುತ್ತೆ. ಈಗ ರೆಕಾರ್ಡ್ ಬರೆದು ಮುಗಿಸಿ ಆಮೇಲೆ ಓದಬೇಕು ಟಿವಿ ನೋಡಬಾರದು ಅಂತ ಅಂದುಕೊಂಡರೆ ನಾವು ರೆಕಾರ್ಡ್ ಬರೆದು ಮುಗಿಸೋ ಹೊತ್ತಿಗೆ ಟಿವಿ ನೆ ನೋಡ್ಬೇಕು ಅಂತ ಮನಸು ನಮ್ಮನ್ನ ಒಪ್ಪಿಸಿಬಿಟ್ಟಿರುತ್ತೆ. ಮನೇಲಿ ಏನಾದ್ರೂ ಈ ಕೆಲಸ ಮಾಡು ಅಂದ್ರೆ ಅದನ್ನ ಮಾಡೋಕೆ ಆಸಕ್ತಿ ಇರೋಲ್ಲ ಬದಲಾಗಿ ಇನ್ನೊಂದೇನನ್ನೋ ಮಾಡು ಅನ್ನುತ್ತೆ. ಉದಾಹರಣೆಗೆ ಅಮ್ಮ ತರಕಾರಿ ಹೆಚ್ಚು ಅಂದ್ರೆ, ಅದು ಬೇಡ ನೀನು ಪಾತ್ರೆ ತೊಳೆದಿಡು ಅನ್ನುತ್ತೆ….. ಒಣಗೋಕೆ ಅಂತ ಹಾಕಿರೋ ಬಟ್ಟೆ ಎತ್ತುಕೊಂಡು ಬಾ ಅಂದ್ರೆ, ಬೇಡ ಗಿಡಗಳಿಗೆ ನೀರು ಹಾಕು ಅನ್ನುತ್ತೆ……..ಒಂದೊಂದು ಸಲ ಅಂತು ಏನು ಮಾಡ್ಬೇಡ ಸುಮ್ನೆ ಕುಳಿತುಕೋ ಅನ್ನುತ್ತೆ………ಅಲ್ಲ ಮನಸು ಯಾಕೆ ಹೀಗೆ ಹೇಳುತ್ತೆ?????

ನಾವು ಬಹಳಷ್ಟು ಜನರನ್ನ ಪ್ರೀತಿಸಬಹುದು ಆದ್ರೆ ನಂ ಮನಸು ಕೆಲವರಿಗಷ್ಟೇ ತನ್ನಲ್ಲಿ ಆಶ್ರಯ ಕೊಡುತ್ತೆ…….ಅವರೆಲ್ಲರಿಗೂ ಒಂದು ರೀತಿಯ ಸ್ಥಾನ ಮಾನಗಳನ್ನ ಕೊಡುತ್ತೆ……ಆದ್ರೆ ಈ ಸ್ಥಾನ ಶಾಶ್ವತ ಅಲ್ಲ…….ಸಂದರ್ಭಕ್ಕೆ ತಕ್ಕಂತೆ ಅದು ಬದಲಾಗುತ್ತೆ……ಒಂದು ಪಟ್ಟಿಯಲ್ಲಿ ಕೊನೆಯಲ್ಲಿರುವ ಹೆಸರು ಮತ್ತೊಂದರಲ್ಲಿ ಮೊದಲನೆ ಸ್ಥಾನನ ಅಲಂಕರಿಸಿರುತ್ತೆ.......ಅಲ್ಲ ನಮ್ಮ ಮನಸು ಯಾಕೆ ಎಲ್ಲರನ್ನು ತನ್ನವರು ಅಂತ ಒಪ್ಪಿಕೊಳ್ಳೊಲ್ಲ………ಮತ್ತೆ ಆ ಪಟ್ಟಿಯನ್ನು ಅಷ್ಟು ಬೇಗ ಹೇಗೆ ಬದಲಾಯಿಸುತ್ತೆ????

ನಾವು ಯಾರನ್ನ ತುಂಬ ಪ್ರೀತಿಸುತ್ತೇವೋ ಅವ್ರಿಂದಾನೆ ನಮಗೆ ಜಾಸ್ತಿ ದುಃಖ ಆಗೋದು. ಬೇರೆಯವರು ಅದೇ ಮಾತು ಹೇಳಿದ್ರೆ ಬರದೆ ಇರೋ ದುಃಖ ನಾವು ಪ್ರೀತಿಸುವವರ ಬಾಯಿಂದ ಬಂದ್ರೆ ಎಲ್ಲಿದ್ರು ಹುಡುಕಿಕೊಂಡು ಬಂದು ಬಿಡುತ್ತೆ.……ಮನಸಲ್ಲೇ ಇರುವವರು ಹೇಳಿದ ಮಾತು ನಂ ಮನಸಿಗೆ ಬೇಗ ಚುಚ್ಚುತ್ತೆ ಅಲ್ವ…….ಅದರಿಂದ ಆಗೋ ನೋವು ಅಷ್ಟೆ ಜಾಸ್ತಿ ಅಲ್ವ….….ಆದ್ರೂ ನಮಗೆ ಅವರ ಮೇಲೆ ಇರೋ ಪ್ರೀತಿ ಕಡಿಮೆ ಆಗೋಲ್ಲ…….ಬದಲಾಗಿ ಅವರನ್ನ ಇನ್ನು ಹೆಚ್ಚು ಪ್ರೀತಿಸ್ತೀವಿ…… ಅಲ್ಲ, ಯಾವಾಗಲು ಸಂತೋಷವಾಗಿರಬೇಕು ಅನ್ನೋ ನಂ ಮನಸ್ಸು ಅವರ ಬಗ್ಗೆ ಇರೋ ಪ್ರೀತಿನೆ ನಮ್ಮ ದುಃಖಕ್ಕೆ ಕಾರಣ ಅಂತ ಗೊತ್ತಿದ್ದೂ ಅವರನ್ನ ದೂರ ಮಾಡಿಕೊಳ್ಳೋಕೆ ಇಷ್ಟ ಪಡೋಲ್ಲ ಯಾಕೆ??????

ಎಷ್ಟೇ ಸ್ನೇಹ ಇರಲಿ ಸ್ನೇಹಿತರಲ್ಲಿ ಯಾರಾದ್ರು ಒಬ್ರು ನಮಗಿಂತ ಉತ್ತಮ ಅನಿಸಿದರೆ ಮನಸು ಅವರ ಬಗ್ಗೆ ನಮಗೇ ಗೊತ್ತಿಲ್ಲದ ಹಾಗೆ ಒಂದು ರೀತಿ ಅಸೂಯೆ ಬೆಳೆಸಿಕೊಳ್ಳುತ್ತೆ…….. ನೀನು ಅವರಿಗಿಂತ ಉತ್ತಮ ಅಂತ ಅನ್ನಿಸಿಕೊಳ್ಳುವಂಥದ್ದನ್ನು ಏನಾದ್ರೂ ಮಾಡು ಅನ್ನುತ್ತೆ…….ಅವರ ಮುಂದೆ ಅದನ್ನ ತೋರಿಸದಿದ್ದರೂ ನೀನು ಅವರಿಗಿಂತ ಯಾವುದರಲ್ಲೂ ಕಡಿಮೆಯಿಲ್ಲ. ಅವರಿಗಿಂತ ಹೆಚ್ಚು ಸಾಧಿಸಬಲ್ಲೆ ಅದನ್ನ ಮಾಡಿ ತೋರಿಸು ಅನ್ನುತ್ತೆ……. ಇದು ಒಳ್ಳೆಯದಾ ಅಥವಾ ಕೆಟ್ಟದ್ದಾ????.

ಯಾವುದಾದರು ತಪ್ಪು ನಡೆದರೆ ಅದಕ್ಕೆ ತಾನೆ ಕಾರಣ ಅಂತ ಗೊತ್ತಿದ್ರು ನಂ ಕಳ್ಳ ಮನಸು ಆ ತಪ್ಪನ್ನ ಬೇರೆಯವರ ಮೇಲೆ ಹಾಕೋಕೆ ಪ್ರಯತ್ನ ಪಡುತ್ತೆ……… ಅಕಸ್ಮಾತ್ ಆಗದಿದ್ರೆ ಆ ತಪ್ಪಲ್ಲಿ ಬೇರೆಯವರಿಗೂ ಪಾಲು ಇದೆ ಅಂತ ವಾದಿಸುತ್ತೆ…… ಅದೂ ಸಾಧ್ಯ ಆಗಲಿಲ್ಲ ಅಂದ್ರೆ ಆ ತಪ್ಪನ್ನೇ ಬೇರೆಯವರು ಮಾಡಿರುತ್ತಾರೆ ಅಂತ ಉದಾಹರಣೇನು ಕೊಡುತ್ತೆ…….ಇದ್ಯಾವುದು ಆಗ್ಲಿಲ್ಲ ಅಂದ್ರೆ ಅದು ತಪ್ಪೇ ಅಲ್ಲ ಅಂತಾನು ಸಾಧಿಸಿ ಬಿಡುತ್ತೆ……..ಅಲ್ಲ ಅದು ತಪ್ಪು ಅಂತ ಗೊತ್ತಿದ್ರು ಹೀಗೆ ವಾದ ಮಾಡೋಕೆ ನಂ ಮನಸಿಗೆ ಹೇಗೆ ಸಾಧ್ಯ?????

ಇನ್ನು ಎಷ್ಟೋ ವೈಚಿತ್ರ್ಯಗಳ ಸರಮಾಲೆ ಈ ಮನಸು……ಆದ್ರೆ ಅದೂ ಹೇಳೋದೆಲ್ಲ ನಂ ಒಳ್ಳೆಯದಕ್ಕೆ ಅನ್ನೋ ಭಾವನೆ ನಮ್ಮಲ್ಲಿ ಬರೋ ಹಾಗೆ ಮಾಡಿಬಿಡುತ್ತೆ……ಹೌದಲ್ವಾ ಈ ಮನಸು
ಥರ ಥರ ಥರ ಥರ ಒಂಥರಾ………….

No comments:

Post a Comment