Friday, August 28, 2009

ಕಲಿಗಾಲ

ವಿಸ್ಮಯವೇನೋ ಇದು - ನನ್ನ ನಿನ್ನ ಮಿಲನ
ವಾರೆಗಣ್ಣನೋಟ, ಪಿಸುಮಾತು, ಲಜ್ಜೆ ,ತುಂಬು ಸಡಗರದ ನಡುವೆ
ರುಷವೇ ಮನೆಮಾಡಿತ್ತು ಮನದಿ ನಮ್ಮ ವಿವಾಹದಂದು

ವಿಪರ್ಯಾಸವೇನೋ - ಇದು ನನ್ನ ನಿನ್ನ ಕದನ
ವಾದ ವಿವಾದ, ಸಿಡುಕು, ಮುನಿಸು, ಭಿನ್ನಾಭಿಪ್ರಾಯವೆಲ್ಲಾ ಸೇರಿ
ಡ ಸೇರದ ದೋಣಿಯಾಯ್ತು ನಮ್ಮ ಬಾಳು

ವಿಧಿಯಾಟವೇನೋ ಇದು - ನನ್ನ ನಿನ್ನ ವಿಚ್ಛೇದನ
ಣರಂಗದಲ್ಲಿರುವಂಥ ದ್ವೇಷ, ದರ್ಪ, ಅಸೂಯೆ, ದುರಭಿಮಾನಗಳ ನಡುವೆ
ತ್ಯೆಯಾಗಿತ್ತು ಸುಖ ಸಂತೋಷ ನಮ್ಮ ಒಡಲಾಳದಲ್ಲಿ

ಇದು ನಾನು ನನ್ನ ಗೆಳತಿ ನಯನ analog communication theory class ಅಲ್ಲಿ ಬರೆದಿದ್ದು... ಹಾಗಾಗಿ ಇದರ ಕ್ರೆಡಿಟ್ ಇಬ್ಬರಿಗೂ ಸೇರುತ್ತೆ....

9 comments:

  1. ebbru yest paata kelthivi antha gothagathe yellargu eega... :)

    ReplyDelete
  2. ಇದು ನಾನು ನನ್ನ ಗೆಳತಿ ನಯನ analog communication theory class ಅಲ್ಲಿ ಬರೆದಿದ್ದು >>>>>>.

    ಒಳ್ಳೆ ಆಭ್ಯಾಸ ಇದು

    ಇಂತಿ
    ವಿನಯ

    ReplyDelete
  3. @ ನಯನ
    ಶೇ. ೧೦೦ರಷ್ಟು ನಿಜ..
    @ ವಿನಯಣ್ಣ...
    ಧನ್ಯವಾದಗಳು

    ReplyDelete
  4. adikke class alli ella question gu uttara kododu

    ReplyDelete
  5. @ niranjan ನಾನು ಯಾವ ಪ್ರಶ್ನೆಗೂ ಉತ್ತರ ಹೇಳಿಲ್ಲವಲ್ಲ... doubts ಕೇಳಿದ್ದೀನಿ ಅಷ್ಟೆ.. ಅದು ACT ಕ್ಲಾಸಲ್ಲಂತೂ ಅಲ್ಲ...

    ReplyDelete
  6. ಕವನವೇನೊ ಬಹಳ ಚೆನ್ನಾಗಿದೆ...
    ವಿಪರ್ಯಾಸ ಅಂದರೆ ಕ್ಲಾಸಿನಲ್ಲಿ ಹೊಳೆದಿದೆಯಲ್ಲ....ಹಹಹಹಾ...
    ಬರೀತಾ ಇರಿ....
    ಕ್ಲಾಸಿನಲ್ಲಿ ಅಲ್ಲದೆ...

    ReplyDelete
  7. ಧನ್ಯವಾದಗಳು... ಕ್ಲಾಸಿಲ್ಲ ಅಂದ್ರೆ ಬರೆಯೋಕೆ ಮೂಡೇ ಇರೊಲ್ಲ... ಕ್ಲಾಸೇ ಸ್ಫೂರ್ತಿ ನಮ್ಮಿಬ್ರಿಗೂ... :)

    ReplyDelete