Friday, July 4, 2008

ವಿಚಿತ್ರ ಮನಸು(೧)

ಅಲ್ಲ ನಮ್ಮ ಮನಸು ಎಷ್ಟು ವಿಚಿತ್ರ ಅಲ್ವೇನ್ರಿ. ನಾವು ಈ ಮನಸಿನ ಬಗ್ಗೆ ಸ್ವಲ್ಪ ಯೋಚನೆ ಮಾಡಿದ್ರು ನಮಗೆ ಈ ಭಾವನೆ ಬಂದು ಬಿಡುತ್ತೆ. ಪ್ರತಿಯೊಂದು ವಿಷಯದಲ್ಲೂ ನಮ್ಮ ಮನಸು ತೀರ ವಿಚಿತ್ರವಾಗೆ ಇರುತ್ತೆ. ಅದರಲ್ಲಿ ಮೂಡೋ ಭಾವನೆಗಳು ಅಷ್ಟೆ ವಿಚಿತ್ರ ಅಲ್ವ…

ನಾನು ಯಾಕೆ ಹೀಗೆ ಹೇಳ್ತೀನಿ ಅಂದ್ರೆ ಯಾರನ್ನೇ ಆಗ್ಲಿ ನೋಡಿದ್ ತಕ್ಷಣ ಅವರ ಬಗ್ಗೆ ಒಂದು ಭಾವನೆ ನಮ್ಮ ಮನಸಲ್ಲಿ ಬಂದು ಬಿಡುತ್ತೆ. ಅದರಿಂದ ಅವರು ಒಳ್ಳೆಯವರ ಅಥವಾ ಕೆಟ್ಟವರ ಅಂಥ ನಾವು ನಿರ್ಧಾರ ಮಾಡಿಬಿಡ್ತೀವಿ …… ಇದರಲ್ಲಿ ಏನು ವಿಚಿತ್ರ ಅಂತ ನೀವು ಕೇಳಬಹುದು ….. ಅಲ್ಲ ಅವ್ರ ಜೊತೆ ಒಂದು ಸಲ ಮಾತಾಡೋಕೆ ಮುಂಚೆನೇ ಅವ್ರ ಬಗ್ಗೆ ಒಂದು ಅಭಿಪ್ರಾಯ ಬೆಳೆಸಿಕೊಳ್ಳೋದು ಹೇಗೆ ಸಾಧ್ಯ?.... ಆಮೇಲೆ ಇನ್ನೊಂದೇನಂದ್ರೆ ನನ್ನ ಅನುಭವದಲ್ಲಿ ನನ್ನ ಮನಸು ಇದುವರೆಗೆ ಬೆಳೆಸಿಕೊಂಡಿರೋ ಅಭಿಪ್ರಾಯದಲ್ಲಿ ಒಂದು ಸಲಾನೂ ತಪ್ಪಾಗಿಲ್ಲ………ಇದು ಹೇಗೆ ಸಾಧ್ಯ ಅಂತ?????

ಹೋಗ್ಲಿ ಆ ಅಭಿಪ್ರಾಯದ ವಿಷಯ ಪಕ್ಕಕ್ಕೆ ಇಡೋಣ….. ಇನ್ನು ಈ ಮನಸು ಎಲ್ಲರನ್ನು ಅಷ್ಟು ಸುಲಭವಾಗಿ ನಂಬೋಲ್ಲ……..ಕೆಲವರನ್ನ ಬೇಗ ನಂಬಿದ್ರೆ ಕೆಲವರನ್ನ ಬಹಳಷ್ಟು ಸಲ ಪರೀಕ್ಷಿಸಿ ನಂಬುತ್ತೆ…….ಅದು ಯಾಕೆ ಹಾಗೆ ಅಂತ ಗೊತ್ತಾಗೊಲ್ಲ ಮತ್ತೆ ಕೆಲವೊಂದ್ಸಲ ಏನಾಗುತ್ತೆ ಅಂದ್ರೆ ಯಾರೋ ಒಬ್ರು ಒಳ್ಳೆಯವರು ಅಂತ ಗೊತ್ತಿದ್ರು ಅವ್ರನ್ನ ಮನಸು ಅಷ್ಟು ಬೇಗ ನಂಬೋಲ್ಲ ಇದು ಉಲ್ಟಾ ಅಗೋ ಪರಿಸ್ಥಿತಿಗಳು ಸಾಕಷ್ಟಿವೆ. ಇಲ್ಲಿ ಮನಸು ಯಾರನ್ನಾದರು ನಂಬೋಕೆ ಬಳಸೋ ಮಾಪಕ ಯಾವ್ದು????????

ಆಮೇಲೆ ಒಂದು ಸಲ ನಂಬಿದ್ರೆ ಅವರ ಬಗ್ಗೆ ನಾವು ತುಂಬಾ ವಿಶ್ವಾಸ ಇಟ್ಟುಕೊಂಡುಬಿಡ್ತೀವಿ…. ಅದನ್ನ ಬದಲಾಯಿಸೋಕೆ ತುಂಬ ಕಷ್ಟ…….. ಆದ್ರೆ ಅವರೇನಾದ್ರೂ ನಮ್ಮ ನಂಬಿಕೆಗೆ ಅರ್ಹರಲ್ಲ ಅಂತ ಗೊತ್ತಾದ್ರೆ ಆಗೋ ಆಘಾತ ಇದೆಯಲ್ಲ ಅದನ್ನ ಯೋಚನೆ ಮಾಡಿದ್ರೆನೇ ಮೈ ಜುಮ್ಮೆನ್ನುತ್ತೆ…… ಆದ್ರೆ ವಿಪರ್ಯಾಸ ಏನು ಅಂದ್ರೆ ಆ ವಿಶ್ವಾಸ ದ್ರೋಹಾನ ಮರೆಯೋಕೆ ನಂ ಮನಸು ಮತ್ತೊಬ್ಬರ ಮೇಲಿನ ವಿಶ್ವಾಸ ಹೆಚ್ಚು ಮಾಡಿಕೊಳ್ಳುತ್ತೆ……..ಯಾಕ್ ಹೀಗೆ?????

ಅದು ಹೋಗ್ಲಿ……. ಒಂದೇ ವಿಷಯಾನ ನಮ್ಮ ಮನಸು ಎಷ್ಟೊಂದ್ ಥರ ಅರ್ಥೈಸುತ್ತೆ ಅಲ್ವ……. ಒಂದೇ ಮಾತನ್ನ ಬೇರೆ ಬೇರೆ ಸಂದರ್ಭದಲ್ಲಿ ಬೇರೆ ಬೇರೆ ರೀತಿ ಅರ್ಥ ಮಾಡಿಕೊಳ್ಳುತ್ತೆ….. ಆದ್ರೆ ಅದು ಯಾವಾಗಲು ತನ್ನ ಪರವಾಗೇ ಮಾತುಗಳನ್ನ ತಿರುಚೋದು…….ಆದ್ರೆ ಒಂದು ಸಮಯದಲ್ಲಿ ಒಂದು ರೀತಿ ಅರ್ಥಕ್ಕೆ ತಲೆಯಾಡಿಸಿದ್ದ ನಾವು ಮತ್ತೆ ಇನ್ನೊಂದು ಸಂದರ್ಭದಲ್ಲಿ ಆ ವಿಚಾರಕ್ಕೂ ತಲೆ ಆಡಿಸ್ತೀವಿ…….. ಅಲ್ಲ ನಂ ಮನಸು ಇಷ್ಟೊಂದು ರೀತಿ ಹೇಗೆ ಯೋಚನೆ ಮಾಡುತ್ತೆ ಅಂತ???????

ಅದು ಸರಿ….. ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳೋದರಲ್ಲೂ ಮನಸು ಇದೇ ಆಟ ಆಡುತ್ತೆ……. ಸಂದರ್ಭಗಳನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಮಾತ್ರ ನೋಡುತ್ತೆ………ನನ್ ಜೀವನದಲ್ಲೇ ನಡೆದಿದ್ದ ಒಂದು ಸಣ್ಣ ಸಂದರ್ಭ………..

ನಾನಾಗ ೮ನೆ ತರಗತಿಯಲ್ಲಿದ್ದೆ. ನಮ್ಮಕ್ಕ ೧ ಪಿ ಯು ನನ್ ತಮ್ಮ ೧ನೆ ತರಗತಿಯಲ್ಲಿದ್ದ. ಅಪ್ಪ ಅಕ್ಕನ ಟ್ಯೂಶನ್ ಕಾಲೇಜ್ ಅಂತ ಓಡಾಡುತ್ತ ಇದ್ರೆ ಅಮ್ಮ ತಮ್ಮನ್ನ ಓದಿಸೋದ್ರಲ್ಲಿ ಮಗ್ನರಾಗಿರುತ್ತಿದ್ರು. ನನ್ ಮನಸಿಗೆ ಆಗ ಸ್ವಲ್ಪ ಏಕಾಂಗಿತನ ಕಾಡ್ತಾ ಇತ್ತು ಅದು ನೀನು ಒಂಟಿ ಒಂಟಿ ಅಂತ ಹೇಳ್ತಾ ಇತ್ತು . ಅದೇ ಸಮಯಕ್ಕೆ ನನಗೆ ಭಾಸನ ಮಧ್ಯಮವ್ಯಾಯೋಗ ಅನ್ನೋ ಸಂಸ್ಕೃತ ನಾಟಕದ ಕನ್ನಡಾನುವಾದ ಸಿಕ್ತು. ಅದು ಒಂದು ದೊಡ್ಡ ಕಥೆ ಚಿಕ್ಕದಾಗಿ ಹೇಳ ಬೇಕು ಅಂದ್ರೆ……..

ಘಟೋತ್ಕಚ ತನ್ ತಾಯಿ ಹಿಡಿಂಬಿಯ ಊಟಕ್ಕೋಸ್ಕರ ಒಂದು ಬ್ರಾಹ್ಮಣ ಕುಟುಂಬದವ್ರನ್ನ ತಡೆದು ನಿಲ್ಸಿ ಅವರಲ್ಲಿ ಒಬ್ಬರು ಆಹಾರವಾಗಿ ಬರಬೇಕು ಅಂತ ಹೇಳ್ತಾನೆ. ಮನೆ ನೋಡಿಕೊಳ್ಳೋ ಜವಾಬ್ದಾರಿ ಇರೋದ್ರಿಂದ ಆ ಬ್ರಾಹ್ಮಣ ಮತ್ತೆ ಅವನ ಹೆಂಡ್ತಿ ಆಹಾರ ಆಗೋಕೆ ಸಾಧ್ಯ ಇಲ್ಲ…… ತಂದೆ ತಾನು ಹಿರಿ ಮಗನನ್ನು ತುಂಬಾ ಪ್ರೀತಿಸುತ್ತ ಇರೋದ್ರಿಂದ ಅವನನ್ನು ಕಳಿಸೊಲ್ಲ ಅಂತಾನೆ……..ತಾಯಿ ತಾನು ಕಿರಿ ಮಗನನ್ನು ತುಂಬಾ ಪ್ರೀತಿಸುತ್ತ ಇರೋದ್ರಿಂದ ಅವನನ್ನು ಕಳಿಸೊಲ್ಲ ಅಂತಾಳೆ……...ಇನ್ನು ಉಳಿದವನು ಮಧ್ಯದವನು ಮಾತ್ರ……ಅವನೇ ಆಹಾರವಾಗಿ ಹೋಗಬೇಕಾಗುತ್ತೆ…….ಆದ್ರೆ ಅವನು ಸಂಧ್ಯಾವಂದನೆಗೆ ಅಂತ ಘಟೋತ್ಕಚನಿಂದ ಅನುಮತಿ ತಗೊಂಡು ಹೋಗಿ ವಾಪಾಸಾಗೋಲ್ಲ .ಆಗ ಘಟೋತ್ಕಚ ……ಓ ಮಧ್ಯಮ ಅಂತ ಕೂಗಿದ್ದನ್ನ ಕೇಳಿಸಿಕೊಂಡು ಭೀಮ ತನ್ನನ್ನು ಯಾರೋ ಕರೀತಾ ಇದ್ದಾರೆ ಅಂತ ಅವನಲ್ಲಿಗೆ ಬರ್ತಾನೆ. ಬಂದ್ ಮೇಲೆ ಸ್ವಲ್ಪ ಮಾತುಕಥೆ ನಡೆದು ಅವ್ರು ಹಿಡಿಂಬಿ ಹತ್ರ ಹೋದಾಗ ಭೀಮನಿಗೆ ಘಟೋತ್ಕಚ ತನ್ನ ಮಗ ಅಂತ ಗೊತ್ತಾಗುತ್ತೆ……

ಈ ಕಥೆ ಓದಿದಾಗ ನನ್ ಮನಸು ನೀನು ಅದೇ ಸ್ಥಿತಿಯಲ್ಲಿ ಇದ್ದೀಯ. ನೋಡು ನೀನು ಮನೇಲಿ ಮಧ್ಯದವಳು.ನಿಮ್ಮಪ್ಪನ್ಗೆ ನಿಮ್ಮಕ್ಕನನ್ನು ಕಂಡ್ರೆ ಪ್ರೀತಿ ಜಾಸ್ತಿ. ನಿಮ್ಮಮಂಗೆ ನಿನ್ ತಮ್ಮನ್ನ ಕಂಡ್ರೆ ಇಷ್ಟ ನಿನ್ನನ್ನ ಪ್ರೀತಿಸೋರು ಯಾರು ಇಲ್ಲ ಅಂತು. ಆಗ ನಾನು ಅದನ್ನ ನಂಬಿದೆ. ಎಷ್ಟೋ ರಾತ್ರಿ ನನ್ನನ್ನು ಪ್ರೀತಿಸೋರು ಯಾರೂ ಇಲ್ಲ ಅಂತ ಅತ್ತಿದ್ದೆ…….ಈಗ ಅದ್ರ ಬಗ್ಗೆ ಯೋಚನೆ ಮಾಡಿದ್ರೆ ಅದೇ ಮನಸು ನೀನವಾಗ ಎಷ್ಟು ಬಾಲಿಶವಾಗಿ ಯೋಚನೆ ಮಾಡ್ತಾ ಇದ್ದೆ ಅಂತ ಹೇಳುತ್ತೆ…… ಅಲ್ಲ ನಂ ಮನಸು ಯಾಕೆ ಯಾವಾಗಲೂ ಒಂದೇ ಥರ ಇರೋಲ್ಲ???????

ಇನ್ನೂ ಎಷ್ಟೋ ವಿಚಿತ್ರಗಳು ನಮ್ಮ ಮನಸಿನ ಬಗ್ಗೆ…ಅಲ್ಲ ಈ ಮನಸು ವಿಚಿತ್ರ ಅಂತ ಹೇಳ್ತಾ ಇರೋದು ನನ್ ಮನಸೇ …. …..ಮನಸಿನ ವೈಚಿತ್ರ್ಯದ ಬಗ್ಗೆ ಮನಸೇ ಹೇಳೋದು…. ಏನು ವಿಚಿತ್ರ .ಸಧ್ಯಕ್ಕೆ ಸಮಯ ಇಲ್ಲ……ಮುಂದಿನ ಪೋಸ್ಟಲ್ಲಿ ಮತ್ತೆ ಇದರ ಬಗ್ಗೆ ಬರಿತೀನಿ……ಅಷ್ಟರೊಳಗೆ ಈ ಮೇಲಿನ ಪ್ರಶ್ನೆಗಳಿಗೆ ನಿಮಗೇನಾದ್ರು ಉತ್ತರ ಗೊತ್ತಿದ್ರೆ ನನಗೆ ಅದನ್ನ ಹೇಳ್ತೀರಾ ಪ್ಲೀಸ್……..

2 comments:

  1. ನಿಮ್ಮ ಪ್ರಶ್ನೆಗಳಿಗೆ ಉತ್ತರ ಕ೦ಡುಹಿಡಿಯೋದು ದೂರದ ಮಾತಾದರೂ, ಉತ್ತರ ಯಾವ ಮಾರ್ಗದಲ್ಲಿ ಸಿಗುತ್ತೆ ಅ೦ತ ಮೊದಲು ಕ೦ಡುಹಿಡಿಯೊದಕ್ಕೆ ಪ್ರಯತ್ನ ಪಡ್ಬೇಕು ಅನ್ಸುತ್ತೆ!
    ನನಗನಿಸೊ ಪ್ರಕಾರ ಮನಸ್ಸು ಒ೦ದೇ ಅಲ್ಲ, ಇಲ್ಲಿ ಬದ್ಧಿ ಕೂಡಾ ಆಟ ಅಡ್ತಾ ಇದೆ!

    ReplyDelete
  2. ಬುದ್ಧಿಗೆ ಸರಿ ತಪ್ಪು ಗೊತ್ತಾಗುತ್ತೆ ಮನಸಿಗೆ ಗೊತ್ತಾಗೊಲ್ಲ....

    ReplyDelete